ಚಿಕ್ಕಮಗಳೂರು: ಜೀ ಟೀವಿ ಸರಿಗಮಪ ಖ್ಯಾತಿಯ ಹಿನ್ನೆಲೆ ಗಾಯಕಿ ಮಲೆನಾಡಿನ ಹೆಮ್ಮೆಯ ಸಾಧಕಿ ಸಾಧ್ವಿನಿ ಕೊಪ್ಪ ಇವರಿಂದ ಡಿ. ೨ರಂದು ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಗಾನ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುಗಮ ಸಂಗೀತ ಗಂಗಾ ಸಹ ಕಾರ್ಯದರ್ಶಿ ಎಸ್.ಎಸ್ ವೆಂಕಟೇಶ್, ಕಲ್ಕಟ್ಟೆ ಪುಸ್ತಕಮನೆ, ಸುಗಮ ಸಂಗೀತ ಗಂಗ, ಕಲ್ಯಾಣ ನಗರ ಸಾಹಿತ್ಯ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಭಕ್ತಿ ಗೀತೆ, ಭಾವಗೀತೆ, ಜನಪದ ತತ್ವಪದ, ಶಾಸ್ತ್ರೀಯ ಸಂಗೀತದ ಆಯ್ದ ಕೃತಿ ಭಾಗವನ್ನು ಸಾಧ್ವನಿ ಹಾಡಲಿದ್ದಾರೆ ಎಂದರು.

ಮೂಲತಃ ಕೊಪ್ಪದ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಶಾಲೆಯ ಪ್ರಾಚಾರ್ಯ ವಿದ್ವಾನ್ ಶ್ರೀನಿಧಿ ಮತ್ತು ಶೋಭಾ ಶ್ರೀನಿಧಿಯವರ ಪುತ್ರಿ ಕುಮಾರಿ ಸಾಧ್ವ್ವಿನಿ. ವಿದ್ವಾನ್ ಮತ್ತೂರು ಗೋಪಾಲ್ ವಿದ್ವಾಂ ವಿನಯ ಶರ್ಮ ರವರ ಶಿ? ಬಾಲ್ಯದಲ್ಲಿಯೇ ರಾಜ್ಯ ಸರ್ಕಾರದ ಕಲಾಶ್ರೀ ಗೌರವ ಪುರಸ್ಕಾರ ಸ್ವೀಕರಿಸಿದ ಮಲೆನಾಡ ಅಸಾಧಾರಣ ಪ್ರತಿಭಾವಂತೆ ಜೀ ಕನ್ನಡದ ಸರಿಗಮಪದ ಸೀಸನ್ ೧೫ ರ ರನ್ನರ್ ಅಪ್ ಆಗಿದ್ದರು.

ಸೀಸನ್ ೧೭ರ ಜೂರಿ ಸರಿಗಮಪ ಚಾಂಪಿಯನ್‌ಶಿಪ್ ನ ಫೈನಲಿಸ್ಟ್ ಆಗಿದ್ದ ಇವರು ಬಾಲ್ಯದಿಂದ ಇಲ್ಲಿಯವರೆಗೆ ಸಾವಿರಾರು ಕಚೇರಿಗಳನ್ನು ನೀಡಿರುವ ಸಂಗೀತ ಶ್ರಮಜೀವಿ. ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಮನ್ನಣೆ ಗೌರವ ಗಳಿಸುತ್ತಿರುವ ಬಹುಮುಖ ಪ್ರತಿಭೆಯಾಗಿದ್ದಾರೆ ಎಂದು ಹೇಳಿದರು.

ಖ್ಯಾತ ಗಾಯಕ ವಿಜಯ ಪ್ರಕಾಶ್, ನಿರ್ದೇಶಕ ಹಂಸಲೇಖ, ಅರ್ಜುನ್ ಜನ್ಯ ಪ್ರಕಾರ ಇವರು ಮಲೆನಾಡ ಗಾನಸರಸ್ವತಿ. ಭರತನಾಟ್ಯ ಮತ್ತು ವಯಲಿನ್ ಸಾಧನೆ ಮಾಡುತ್ತಿರುವ ಸಾಧಕಿ. ದಕ್ಷಿಣ ಭಾರತದ ಎಲ್ಲಾ ಭಾ?ಗಳನ್ನು ಗಾಯನ ಸೇವೆ ಸಲ್ಲಿಸುತ್ತಿರುವ ’ಸ್ಟಾರ್ ಆಫ್ ಮಲೆನಾಡು’ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆಯಾಗಿದ್ದಾರೆ ಎಂದು ತಿಳಿಸಿದರು.

ಇವರಿಗೆ ತಬಲಾದಲ್ಲಿ ರಾಜೇಶ್ ಭಗವಾನ್, ಕೀಬೋರ್ಡ್‌ನಲ್ಲಿ ಗುರುರಾಜ್, ರಿದಂ ಪ್ಯಾಡ್‌ನಲ್ಲಿ ರಾಮ್‌ರಾವ್, ರಂಗದೊಳ್ ಹಾಗೂ ಕೊಳಲಿನಲ್ಲಿ ಅಭಿ?ಕ್ ಬೆಂಗಳೂರು ಸಾತ್ ನೀಡಲಿದ್ದಾರೆ. ಸಮಾರಂಭದಲ್ಲಿ ಡಾ. ಜೆ.ಪಿ ಕೃ?ಗೌಡ, ರೇಖಾ ನಾಗರಾಜ್ ರಾವ್, ಎಂ.ಎಸ್ ಲೋಕೇಶಪ್ಪ ಸಾಧ್ವಿನಿ ಅವರನ್ನು ಸನ್ಮಾನಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ನಗರ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಹಾಜರಿದ್ದರು.

Sadhvinikoppa song diversity in the city