ಚಿಕ್ಕಮಗಳೂರು: ಯಕ್ಷಗಾನ ಅಭಿಮಾನಿ ಬಳಗ ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀ ಹನುಮಗಿರಿ ಮೇಳದಿಂದ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಕರಾವಳಿಯ ಗಂಡು ಕಲೆಯ ಗಟ್ಟಿತನ ಮತ್ತು ವೈಭವವನ್ನು ಅನಾವರಣಗೊಳಿಸಿ ನೋಡುಗರನ್ನು ಬೆರಗುಗೊಳಿಸಿತು.

ಭಾಗವತರ ಕಂಚಿನ ಕಂಠದ ಗಾಯನ, ಅಬ್ಬರಿಸಿದ ಹಿಮ್ಮೇಳ, ಕಲಾವಿದರ ಪ್ರಾಸಬದ್ಧ ಚುರುಕು ಸಂಭಾಷಣೆ, ನವಿರು ಹಾಸ್ಯ, ಮಿಂಚಿನ ನೃತ, ಅದ್ಭುತ ಅಭಿನಯ ನೋಡುಗರನ್ನು ಐದೂವರೆ ಗಂಟೆಗಳಷ್ಟು ದೀರ್ಘಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಜಗನ್ಮಾತೆ ಲೋಕಕಂಟಕನಾಗಿದ್ದ ಮಹಿಷನನ್ನು ಸಂಹರಿಸಿ ಮಹಿಷಾಸುರ ಮರ್ದಿನಿಯಾಗಿ ಲೋಕವನ್ನು ಉದ್ದರಿಸಿದ ಕಥಾ ಹಂದರವನ್ನು ಹೊಂದಿರುವ ಪ್ರಸಂಗವನ್ನು ಪಾತ್ರಧಾರಿಗಳು ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸಿ ಕಲಾಮಂದಿರದಲ್ಲಿ ಭಕ್ತಿಯ ತರಂಗಗಳನ್ನೆ ಬ್ಬಿಸಿದರು.

ಮಹಿಶ ವೇಷದಾರಿ ಪ್ರಸಂಗದ ನಡುವೆ ಅಬ್ಬರಿಸುತ್ತ ಸಭಿಕರ ನಡುವೆ ಬರುವ ಮೂಲಕ ನೋಡುಗರನ್ನು ಬೆರಗುಗೊಳಿಸಿದರೆ, ಪುರೋಹಿತ ಪಾತ್ರಧಾರಿ ಕಟೀಲು ಸೀತಾರಾಮ ಕುಮಾರ್ ಅವರ ತಿಳಿಹಾಸ್ಯ ನಗೆಯ ಬುಗ್ಗೆಗಳನ್ನೆಬ್ಬಿಸಿತು.

ಬಾಲವೇಶದಾರಿಗಳೂ ಸಹ ನುರಿತ ಕಲಾವಿದರು ನಾಚುವಂತೆ ನರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಂ ಡರು ಸುರಾಸುರರ ನಡುವಿನ ಯುದ್ಧದ ಸನ್ನಿವೇಶ ನೋಡುಗರು ತುದಿಗಾಲ ಮೇಲೆ ನಿಲ್ಲು ವಂತೆ ಮಾಡಿತು.

ಈ ವೇಳೆ ಯಕ್ಷಗಾನ ಅಭಿಮಾನಿ ಬಳಗ ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದ ಮೇಳದ ವ್ಯವಸ್ಥಾಪಕ ಹರೀಶ್, ಯಕ್ಷಗಾನ ಕೇವಲ ಕರಾ ವಳಿಯ ಕಲೆಯಲ್ಲ ಅದು ಇಡೀ ಕರ್ನಾಟಕದ ಕಲೆ. ಕನ್ನಡವನ್ನು ಕಲಿಸಿ ಉಳಿಸಿ ಬೆಳೆಸುತ್ತಿ ರುವ ಏಕೈಕ ಕಲೆ ಹಾಗಾಗಿ, ಅದನ್ನು ಮುಂದಿನ ತಲೆಮಾರಿಗೆ ಉಳಿಸುವ ಹೊಣೆಗಾರಿಕೆ ಕನ್ನಡಿಗರ ಮೇಲಿದೆ ಎಂದರು.

ಯಕ್ಷಗಾನ ಅಭಿಮಾನಿ ಬಳಗದ ಅಧ್ಯಕ್ಷ ಆನಂದ್‌ಕುಮಾರ್ ಶೆಟ್ಟಿ ಸಂಚಾಲಕ ಕೆ.ಎನ್. ಮಂಜುನಾಥ ಭಟ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಹವ್ಯಕ ಬಳಗದ ಅಧ್ಯಕ್ಷ ರಾಮಾ, ಹಾಸ್ಯಗಾರ ಯಕ್ಷಗಾನ ಅಭಿಮಾನಿ ಬಳಗದ ಕಾರ್ಯ ದರ್ಶಿ ಶಂಕರನಾರಾಯಣ ಭಟ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ. ಪಡು ಬಿದ್ರಿ, ನಿರ್ದೇಶಕ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

Sridevi Mahatme Yakshagana