ಚಿಕ್ಕಮಗಳೂರು:  ಸುವರ್ಣ ಪಟ್ಟಾಭಿ?ಕ ಮಹೋತ್ಸವ, ಶ್ರೀ ಗುರುಪಾದುಕ ೧೦೮ ಸ್ವರ್ಣ ಪು?ರ್ಚನೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸುವರ್ಣ ಸಂಭ್ರಮ, ಜಗದ್ಗುರು ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳ ಪಟ್ಟಾಭಿ?ಕ ದಶಮಾನೋತ್ಸವ ಗುರುವಂದನಾ ಹಾಗೂ ಚುಂಚೋತ್ಸವ ಸಾಂಸ್ಕೃತಿಕ ಸಮಾಗಮ ಡಿ.೨೬ ರಿಂದ ೨೮ರವರೆಗೆ ಶೃಂಗೇರಿಯ ಶ್ರೀ ಬಾಲಗಂಗಾಧರನಾಥ ಮಹಾವೇದಿಕೆಯಲ್ಲಿ ನಡೆಯಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಎಐಟಿ ಪ್ರಾಂಶುಪಾಲ ಡಾ. ಜಯದೇವ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದ ಸ್ವಾಮೀಜಿ ವಹಿಸುವರು. ಶೃಂಗೇರಿ ಶಾಖಾ ಮಠದ ಗುಣನಾಥ ಶ್ರೀ ಸೇರಿದಂತೆ ವಿವಿಧ ಸಂಸ್ಥಾನ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.

ಡಿ.೨೭ರಂದು ಶೃಂಗೇರಿಯ ಬಿಜಿಎಸ್ ಆವರಣದಲ್ಲಿ ನಡೆಯಲಿರುವ ಪಟ್ಟಾಭಿ?ಕ ದಶಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಉದ್ಘಾಟಿಸಲಿದ್ದು, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್, ಸಿ.ಟಿ ರವಿ, ಟಿ.ಡಿ ರಾಜೇಗೌಡ, ಅರಗ ಜ್ಞಾನೇಂದ್ರ., ಎಂ.ಕೆ ಪ್ರಾಣೇಶ್, ಎಸ್.ಎಲ್ ಭೋಜೇಗೌಡ, ಡಿ.ಎನ್ ಜೀವರಾಜ್, ಶ್ರೀಮತಿ ಮೋಟಮ್ಮ, ಕೆ.ಎಸ್ ಆನಂದ್, ಟಿ.ರಾಜಶೇಖರ್, ಮುನೇಶ್ ಭಾಗವಹಿಸುವರು ಎಂದು ಹೇಳಿದರು.

ಡಿ. ೨೮ರಂದು ಬೆಳಗ್ಗೆ ೯:೩೦ಕ್ಕೆ ಆಧ್ಯಾತ್ಮ ಮತ್ತು ಆರೋಗ್ಯ, ಕ್ರೀಡೆ ಹಾಗೂ ವಿಜ್ಞಾನ ತಾರಾಲಯ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸಾನಿಧ್ಯ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಶ್ರೀ, ವೆಂಕಟೇಶ ಮಹಾರಾಜ, ವೀರಯ್ಯಸ್ವಾಮಿ, ಗಂಗಾಧರ ಶ್ರೀ, ದಯಾನಂದಗಿರಿ ಕೈಲಾಸನಂದನಾಥ ಶ್ರೀ, ಶಂಕರನಂದಶ್ರೀ, ಕುಮಾರಯ್ಯ ಶ್ರೀ ವಹಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಕುಲಪತಿ ಡಾ|| ಎನ್.ಎಸ್ ರಾಮೇಗೌಡ, ಉಪನ್ಯಾಸ ಮೈಸೂರಿನ ಸುಯೋಗ ಆಸ್ಪತ್ರೆ ವೈದ್ಯ ಡಾ|| ಎಸ್.ಪಿ ಯೋಗಣ್ಣ ಅಧ್ಯಾತ್ಮ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಇದೇ ದಿನ ಸಂಜೆ ನಡೆಯುವ ಚುಂಚೋತ್ಸವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಎಐಟಿ ಶ್ರೀ ಡಾ|| ನಿರ್ಮಲಾನಂದನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಗುಣನಾಥ ಶ್ರೀ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹೆಚ್.ಡಿ ತಮ್ಮಯ್ಯ, ಡಾ|| ಜಯಪ್ರಕಾಶ್‌ಗೌಡ, ಡಾ|| ಭೈರೇಗೌಡ, ಡಾ|| ಜಯದೇವ್, ಪುಟ್ಟನಾಯ್ಕ, ಧರ್ಮಪ್ಪ ಬೆಳಗಲಿ, ತಮ್ಮಣ್ಣಗೌಡ ಮತ್ತಿತರರು ಭಾಗವಹಿಸಲಿರುವರು.

ಇದೇ ಸಂದರ್ಭದಲ್ಲಿ ವಿಸ್ಮಯ ದೇವರು ಯಾರು, ದುಡುಕಿದ ಮನೆಗಳು, ಮರದೊಡಲು ಪುಸ್ತಕ ಬಿಡುಗಡೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿನ ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಗಾರೆಡ್ಡಿ, ಮಾಡ್ಲ ಪ್ರಕಾಶ್ ಇದ್ದರು.

Tenth Anniversary Guruvandana Program of Sri Dr. Nirmalanandanath Mahaswamy