ಚಿಕ್ಕಮಗಳೂರು: ಕಾಂಗ್ರೆಸ್ ಘೋಷಣಾ ಪತ್ರ (ಪ್ರಣಾಳಿಕೆ) ಸಿದ್ಧಪಡಿಸಿದ್ದು ಮಹಮದ್ ಆಲಿ ಜಿನ್ನಾ ಸಹವರ್ತಿಗಳು ಎಂದು ಮಾಜಿ ಸಚಿವ ಸಿ.ಟಿ. ರವಿ ಟೀಕಿಸಿದ್ದಾರೆ.

ತಾಲಿಬಾನಿಗಳಿಗೆ ಸಂತೋಷಪಡಿಸುವ ಯೋಚನೆ ಮತ್ತು ಚಿಂತನೆಗಳು ಈ ಘೋಷಣಾಪತ್ರದಲ್ಲಿವೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೋಲು ಖಚಿತ, ಹಾಗಾಗಿ ಹತಾಶರಾಗಿ ಚೊಂಬಿನ ಜಾಹೀರಾತು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ನಡೆ ನೋಡಿದರೆ ಜಾಹೀರಾತಿನ ತಕ್ಕಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ರು ರಾಜ್ಯದ ಜನರಿಗೆ ಚೆಂಬು ಕೊಟ್ರು, ಹಾಲು ಉತ್ಪಾದಕರ ಸಬ್ಸಿಡಿ ಹಣ ನೀಡಿಲ್ಲಾ, ಅಬಕಾರಿ ಸುಂಕ ಹೆಚ್ಚಳ ಮಾಡಿದ್ರು, ಆಸ್ತಿ ತೆರಿಗೆ ಹೆಚ್ಚಿಸಿದ್ರು, ಸಂವಿಧಾನ ದುರ್ಬಳಕೆ ಮಾಡಿಕೊಂಡ್ರು, ಮೀಸಲಾತಿ ವಿರೋಧಿಗಳೆಂದು ಆರೋಪಗಳ ಸುರಿಮಳೆ ಸುರಿಸಿದರು.

ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಯ ಮೇಲೆ ಆರೋಪ ಮಾಡುತ್ತಿದೆ. ಇದು ಸುಳ್ಳು. ಸಾಲವನ್ನು ವಸೂಲಿ ಮಾಡಲಾಗಿದೆ. ೨೦೨೭ ಜಾಗತಿಕ ಆರ್ಥಿಕ ಶಕ್ತಿ ಆಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ ಎಂದರು.

ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಅತಿ ಹೆಚ್ಚು ವರ್ಷ ಆಡಳಿತ ನಡೆಸಿರೋದು ಕಾಂಗ್ರೆಸ್ ಪಕ್ಷ. ಜನರ ಬದುಕು ಬದಲಾಗಲಿಲ್ಲ, ಚಿಂತನೆಯೂ ಇಲ್ಲ ಆಸೆ ತೋರಿಸಿ ಮತ ಪಡೆದ ವಂಚನೆಯ ತಂತ್ರ ಅವರ ಘೋಷಣಾ ಪತ್ರದಲ್ಲಿ ಅಡಗಿದೆ. ಗರಿಬೀ ಹಠಾವೋ ಅಂದ್ರು, ಗರಿಬೀ ಹಠಾವೋ ಆಗಿದ್ದು ಕಾಂಗ್ರೆಸ್ ಪಕ್ಷದ ನಾಯಕರದ್ದು, ಆ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಅಡಗಿದೆ. ಜಾತಿಯತೆ ವ್ಯವಸ್ಥೆಯನ್ನು ಬಲವಾಗಿ ತೂರಿದ್ದರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮುಖಂಡರಾದ ಪ್ರೇಮ್‌ಕುಮಾರ್, ಮಧುಕುಮಾರ್ ರಾಜ್ ಅರಸ್, ಪುಷ್ಪರಾಜ್, ಸೋಮಶೇಖರ್, ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.

The Congress Manifesto was prepared by Muhammad Ali Jinnah’s associates