ಚಿಕ್ಕಮಗಳೂರು: : ಜನಪರ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ನೇಕಾರರು ಬೆಂಬಲಿಸಬೇಕೆಂದು ಬಿಜೆಪಿ ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕ ಬಿ.ಎಸ್ ಸೋಮಶೇಖರ್ ಮನವಿ ಮಾಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ೧೦ ವ?ಗಳ ಅಧಿಕಾರದ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಅಧಿಕಾರ ನಡೆಸಿರುವುದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಒಂದೇ ಕಾನೂನು ಅಡಿಯಲ್ಲಿ ಆರ್ಟಿಕಲ್ ೩೭೦ ರದ್ದು ಮಾಡಿರುವುದು ಹಾಗೂ ದೇಶದ ಆರ್ಥಿಕ ಸ್ಥಿತಿ ೫ರಿಂದ ೩ನೇ ಸ್ಥಾನಕ್ಕೆ ತರಲು ಬಯಸಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ೨೦೧೪ ರಿಂದ ೨೦೨೪ರ ಅವಧಿಯಲ್ಲಿ ಹಿಂದೆ ಇದ್ದ ೭೪ ಏರ್‌ಪೋರ್ಟ್‌ಗಳ ಸಂಖ್ಯೆಯನ್ನು ೧೪೯ ಏರ್‌ಪೋರ್ಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನೇಕಾರ ವೃತ್ತಿಯನ್ನು ಗುರುತಿಸಿ ೨೦೧೫ರ ಆಗಸ್ಟ್ ೭ ರಂದು ಕೈಮಗ್ಗ ದಿನಾಚರಣೆಯನ್ನು ಘೋ?ಣೆ ಮಾಡಿದ್ದು, ಇನ್ನೂ ಅನೇಕ ನೇಕಾರ ವೃತ್ತಿಯು ಅಭಿವೃದ್ಧಿ ಪಥದತ್ತ ಸಾಗಲು ಮಹತ್ತರ ಪಾತ್ರವನ್ನು ವಹಿಸಿದ್ದಾರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪು?ರಾಜೇಂದ್ರ, ದಯಾನಂದ ಶೆಟ್ಟಿಗಾರ, ವಿನೋದ, ನವೀನ ಬಲ್ಲಾಳ, ಬಿ.ಎಂ ಕುಮಾರ್ ಇದ್ದರು.

nekara samudaya decision to support BJP