ಚಿಕ್ಕಮಗಳೂರು:  ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿರಂತರ ಆಚರಣೆಯಾದಾಗ ಭಾಷೆ ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂದು ಅರಸು ಸಂಘದ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ತಿಳಿಸಿದರು.

ಅವರು ಇಂದು ನಗರದ ಗುರುನಾಥ ವೃತ್ತದ ಅರಸು ಆಟೋ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡದ ಭುವನೇಶ್ವರಿಗೆ ದೇವಿಗೆ ಪೂಜೆ ಸಲ್ಲಿಸುವ ಕಾರ್ಯ ನವೆಂಬರ್‌ನಲ್ಲಿ ಮಾತ್ರ ಮಾಡದೆ ಪ್ರತೀ ದಿನ ಕನ್ನಡ ರಾಜ್ಯೋತ್ಸವ ಆಚರಿಸುವಂತಾದಾಗ ಮಾತ್ರ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಕರೆ ನೀಡಿದರು.

ಸಮಾಜಮುಖಿ ಕಾರ್ಯಕ್ಕೆ ಕೆಲವು ಸಂಘ-ಸಂಸ್ಥೆಗಳು ಬೆರಳೆಣಿಕೆಯಷ್ಟು ಜನ ನಿರಾಕರಿಸುತ್ತಾರೆ, ಉಳಿದ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಅದನ್ನು ಬಳಸಿಕೊಂಡು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು, ಕನ್ನಡ ನಾಡು, ನುಡಿ, ಕಿರು ಚಿತ್ರಗಳ ಪ್ರದರ್ಶನಗಳನ್ನು ಆಯೋಜನೆ ಮಾಡಿದರೆ ಕನ್ನಡ ರಾಜ್ಯೋತ್ಸವಕ್ಕೆ ನಿಜ ಅರ್ಥ ಬರುತ್ತದೆ ಎಂದರು.

ಕನ್ನಡ ರಾಜ್ಯೋತ್ಸವ ನಿರಂತರವಾಗಿ ಆಚರಣೆ ಮಾಡಿದಾಗ ಅನ್ಯ ಭಾಷಿಗರಿಗೆ ಕನ್ನಡದ ಮೇಲೆ ವ್ಯಾಮೋಹ ಬರುವಂತಹ ಸನ್ನಿವೇಶ ಸೃಷ್ಠಿಯಾಗುತ್ತದೆ ಎಂದು ಭಾವಿಸಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು, ಇಂತಹ ಜನಪರವಾದ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡ, ಅರಸು ಸಂಘದ ಪ್ರಧಾನ ಕಾರ್ಯದರ್ಶಿ ದಶರಥ ರಾಜು, ಪದಾಧಿಕಾರಿಗಳಾದ ದೇವರಾಜು ಅರಸು, ಉದಯ್, ಗ್ರಾ.ಪಂ ಮಾಜಿ ಅಧ್ಯಕ್ಷ ದಿನೇಶ್, ಜಗದೀಶ್ ಕೋಟೆ, ಹರೀಶ್, ದೇವರಾಜ್, ಮಹೇಶ್, ಪರಮೇಶ್, ವಿಜಯ್‌ಕುಮಾರ್ ಮತ್ತಿತರರು ಇದ್ದರು.

The Kannada Rajyotsava was organized at Arasu Auto Station Gurunath Circle