ನವದೆಹಲಿ: ಸೌರಮಂಡಲದಲ್ಲಿ ಪ್ರಕಾಶಮಾನವಾದ ಗ್ರಹಗಳು ಎಂದೇ ಕರೆಸಿಕೊಳ್ಳುವ ಶುಕ್ರ ಹಾಗೂ ಗುರುಗ್ರಹಗಳು, ಭೂಮಿಯ ಏಕೈಕ ಉಪಗ್ರಹವಾದ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿವೆ. ಖಗೋಳದಲ್ಲಿ ಇದೊಂದು ವಿಶೇಷ ವಿದ್ಯಮಾನ ಎನಿಸಿಕೊಂಡಿದೆ.

ಸುಮಾರು 29 ಡಿಗ್ರಿಗಳ ಅಂತರವನ್ನು ಹೊಂದಿರುವ ಗ್ರಹಗಳು ಇತ್ತೀಚಿಗೆ ನಿಧಾನವಾಗಿ ಹತ್ತಿರಕ್ಕೆ ಸರಿಯುತ್ತಿದ್ದು, ಗುರುವಾರ ಕೇವಲ 9 ಡಿಗ್ರಿಯಷ್ಟುಅಂತರಕ್ಕೆ ತಲುಪಿವೆ. ಫೆ.27ರಂದು ಇವುಗಳ ನಡುವಿನ ಅಂತರ 2.3 ಡಿಗ್ರಿಗೆ ತಲುಪಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ. 2 ಎರಡು ಗ್ರಹಗಳು ಸಮೀಪಕ್ಕೆ ಬಂದಿರುವ ಸಮಯದಲ್ಲೇ ಚಂದ್ರನೂ ಸಹ ಅವುಗಳ ಜೊತೆಗೆ ಕಾಣಿಸಿಕೊಂಡಿರುವುದು ಮತ್ತಷ್ಟು ವಿಶೇಷವಾಗಿದೆ. ಮಾ.1ರಂದು ಈ ಗ್ರಹಗಳು ಒಂದರ ಹಿಂದೊಂದು ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ವಿಶೇಷ ವಿದ್ಯಮಾನ ಸೃಷ್ಟಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಸೂರ್ಯನೇ ಬಣ್ಣದ ಛತ್ರಿ ಹಿಡಿದು ನಿಂತಿದ್ದ ವಿಸ್ಮಯವೊಂದು ನಡೆದಿತ್ತು. ಸೂರ್ಯಂಗೆ ಟಾರ್ಚಾ! ಎಂದು ಮಾತಿನಲ್ಲಿ ಬಳಸುವುದುಂಟು. ಇಲ್ಲಿ ಸೂರ್ಯಂಗೆ  ಉಂಗುರಾನಾ?  ಎಂದು ಕೇಳುವಂತಾಗಿತ್ತು. ವೈಜ್ಞಾನಿಕವಾಗಿ ಇದನ್ನು  ಸೋಲಾರ್ ಹ್ಯಾಲೋ (Solar Halo, To be precise, 22° Halo) ಎಂದು ಕರೆಯಲಾಗುತ್ತದೆ. ಸೂರ್ಯ ಕಿರಣಗಳು ಭೂಮಿಗೆ ಮೋಡಗಳನ್ನು ಹಾದು ಬರುವ ಮುನ್ನ ಈ ರೀತಿಯ ಏಳು ಬಣ್ಣದ ವೃತ್ತಾಕಾರದ ಉಂಗುರ ನಿರ್ಮಾಣವಾಗಬಲ್ಲದು.

ಭೂಮಿಯಿಂದ 20 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ (ಟ್ರೊಫೋಸ್ಫಿಯರ್) ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ತೀಕರಣವಾಗಿ ಮಂಜಿನ ಹರಳುಗಳಾಗಿರುತ್ತವೆ. ಈ ಗೋಳಾಕಾರದ ಮಂಜಿನ ಹರಳಿನ ಮೂಲಕ ಸೂರ್ಯನ ಬಿಳಿ ಬೆಳಕು ಹಲವು ಸಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆ ಉಂಟಾಗುತ್ತದೆ. ಇದರ ಪರಿಣಾಮ ಸೂರ್ಯನ ಸುತ್ತ22 ಡಿಗ್ರಿ ವೃತ್ತಾಕಾರದಲ್ಲಿ ಈ ಬಗೆಯ ಕಾಮನ ಬಿಲ್ಲುಗಳು ಉಂಟಾಗುತ್ತವೆ ಎಂದು ಖಗೋಳ ವಿಜ್ಞಾನಿ ಹರೋನಹಳ್ಳಿ ಸ್ವಾಮಿ ಹೇಳುತ್ತಾರೆ.

Venus Jupiter Moon Darshan in the same line!