ಹೈದರಾಬಾದ್: ತಮ್ಮ ಒಳ ಉಡುಪುಗಳಲ್ಲಿ ಸುಮಾರು 1.72 ಕೋಟಿ ಮೌಲ್ಯದ ಚಿನ್ನ (Gold) ಸಾಗಿಸುತ್ತಿದ್ದ ಮೂವರು ಮಹಿಳೆಯರು (Womens) ಹಾಗೂ ಇಬ್ಬರು ಪುರುಷರನ್ನು ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು (Customs Officers) ಬಂಧಿಸಿದ್ದಾರೆ.

ದುಬೈನಿಂದ ಬಂದ ಮಹಿಳೆಯರಿಬ್ಬರು ತಮ್ಮ ಒಳಉಡುಪು ಹಾಗೂ ಹೇರ್‌ಬ್ಯಾಂಡ್‌ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 3.283 ಕೆಜಿ ಚಿನ್ನವನ್ನು ಹೈದರಾಬಾದ್ (Hyderabad) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ 1.75 ಕೋಟಿ ಮೌಲ್ಯ ಎಂದು ಅಂದಾಜಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ J9-403 ವಿಮಾನದಲ್ಲಿ ಕುವೈತ್‌ನಿಂದ ಚಿನ್ನ ಸಾಗಿಸುತ್ತಿದ್ದ ಇಬ್ಬರು ಪುರುಷರನ್ನು ಬಂಧಿಸಿದ್ದು, ಅವರಿಂದ 855 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ತೀವ್ರ ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಹಿತಿ ಪ್ರಕಾರ, ದುಬೈನಿಂದ ಬಂದ ಮಹಿಳಾ ಪ್ರಯಾಣಿಕರು ತಮ್ಮ ಹೇರ್‌ಬ್ಯಾಂಡ್ ನಲ್ಲಿ 234 ಗ್ರಾಂ ಚಿನ್ನ ಬಚ್ಚಿಟ್ಟಿದ್ದರು. ಅವರ ಲಗೇಜ್ ತಪಾಸಣೆಗೆ ಒಳಪಡಿಸಿದಾಗ ತಮ್ಮ ಒಳಉಡುಪಿನಲ್ಲೂ ಚಿನ್ನವನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (International Airport) ಕಸ್ಟಮ್ಸ್ ಅಧಿಕಾರಿಗಳು ನಾಲ್ಕು ದಿನಗಳ ಹಿಂದೆಯಷ್ಟೇ 24 ಕ್ಯಾರೆಟ್ ಗುಣಮಟ್ಟದ 2.57 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದರು ಎಂದು ವರದಿಯಾಗಿದೆ.

Women arrested for carrying 3 KG of gold in undergarments