ಚಿಕ್ಕಮಗಳೂರು:  ನಗರಸಭೆಯಿಂದ ನಿರ್ವಹಣೆ ಮಾಡುತ್ತಿರುವ ನಿರಾಶ್ರಿತರ ಕೇಂದ್ರದಲ್ಲಿರುವ ನಿರಾಶ್ರಿತರ ಜೀವನ ಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಪೌರಾಯುಕ್ತ ಬಿ.ಸಿ ಬಸವರಾಜ್ ತಿಳಿಸಿದರು.

ಅವರು ಇಂದು ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ನಗರಸಭೆಯ ಡೇ-ನಲ್ಮ್ ಯೋಜನೆಯಡಿ ಆಯೋಜಿಸಲಾಗಿದ್ದ ವಿಶ್ವ ವಸತಿ ರಹಿತರ ದಿನಾಚರಣೆ ಕಾರ್ಯಕ್ರಮದಲ್ಲಿ ನಿರಾಶ್ರಿತ ಕೇಂದ್ರದಲ್ಲಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜಿಲ್ಲಾದ್ಯಂತ ಇದೊಂದೇ ನಿರಾಶ್ರಿತರ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ನಿರಾಶ್ರಿತರು ಪಡೆದುಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿದರು.

ನಗರಸಭೆಯಿಂದ ನಿರಾಶ್ರಿತರ ಕೇಂದ್ರದ ನಿರ್ವಹಣೆ ಮಾಡುತ್ತಿದ್ದು ನಾವೇ ಅಧ್ಯಕ್ಷರಾಗಿದ್ದೇವೆ, ಆರೋಗ್ಯ ಇಲಾಖೆ ವೈದ್ಯರು ಪೊಲೀಸ್ ಇಲಾಖೆ ಸಮಿತಿಯಲ್ಲಿದ್ದಾರೆ. ಈ ಮೂಲಕ ಅಗತ್ಯ ಇರುವ ಸೌಲಭ್ಯಗಳನ್ನು ನಿರಾಶ್ರಿತರಿಗೆ ಒದಗಿಸಲಾಗುತ್ತಿದೆ ಎಂದರು.

ಆಶ್ರಯ ಇಲ್ಲದೆ ಬೀದಿ ಬದಿ, ಬಸ್ ನಿಲ್ದಾಣಗಳಲ್ಲಿ ಮಲಗುವ ನಿರಾಶ್ರಿತರನ್ನು ಗುರುತಿಸಿ ಅವರಿಗಾಗಿ ದಿನಾಚರಣೆ ಆಚರಿಸುತ್ತಿರುವುದು ಸಂತೋ?ದಾಯಕವಾಗಿದೆ ಜಿಲ್ಲೆಯಾದ್ಯಂತ ಹಾಗೂ ನಗರದಲ್ಲಿ ಎಲ್ಲೆ ನಿರಾಶ್ರಿತರು ಕಂಡು ಬಂದರು ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡಿದರೆ ತಕ್ಷಣ ಸ್ಪಂದಿಸಿ ಈ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಿರಾಶ್ರಿತರ ಸಂಖ್ಯೆ ಇಳಿಮುಖವಾಗಿದೆ ಇದೊಂದು ಒಳ್ಳೆ ಬೆಳವಣಿಗೆ ಸೂರು ಇಲ್ಲದವರು ಬೀದಿ ಬದಿ ಮಲಗಬಾರದೆಂದು ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ನಿರಾಶ್ರಿತರಿಗೆ ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿ ಕೊಡಲು ಅವಕಾಶ ಇದ್ದು ನಿವೇಶನ ನೀಡಲು ಉದ್ದೇಶ ಹೊಂದಲಾಗಿದೆ ಈ ಬಗ್ಗೆ ನಿರಾಶ್ರಿತರ ಮಕ್ಕಳು ಮುಂದೆ ಬಂದು ಅರ್ಜಿ ಸಲ್ಲಿಸಿದರೆ ಉ+೨ ಮಾದರಿಯಲ್ಲಿ ೧೫೦೦ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಶಿವಪ್ಪ, ನಗರಸಭೆ ಚಂದ್ರಶೇಖರ್, ಯೋಜನೆ ಅಧಿಕಾರಿಗಳಾದ ಕಲಾವತಿ, ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

World Homeless Day