ಚಿಕ್ಕಮಗಳೂರು: ಪರಿಸರದ ಕಾಳಜಿ ಮತ್ತು ರಕ್ಷಣೆ ಮಾಡುವ ಮಲೆನಾಡಿನ ಭಾ? ಸಂಸ್ಕೃತಿ, ಪ್ರಕೃತಿ ಬಿಂಬಿಸುವ ಕೌಟುಂಬಿಕ ಕಥಾ ಹಂದರ ಇರುವ ಜಲಪಾತ ಎಂಬ ಚಲನಚಿತ್ರ ಇದೇ ತಿಂಗಳ ೧೩ ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಶೃಂಗೇರಿಯ ರಮೇಶ್ ಬೇಗಾರು ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ೪೦ ವ?ಗಳ ಹಿಂದೆ ಮಲೆನಾಡಿನ ಜನರ ಜೀವನ ಮಟ್ಟ ಹೇಗಿತ್ತು ಈಗ ಹೇಗೆ ಬದಲಾಗಿದೆ ಎಂಬುದರ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ ಸದಭಿರುಚಿಯ ಮನರಂಜನೆಯ ಚಿತ್ರವಾಗಿದ್ದು ನಾಡಿನ ಎಲ್ಲಾ ಪ್ರೇಕ್ಷಕರು ಚಿತ್ರ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಬದಲಾದ ಬದುಕಿನಲ್ಲಿ ಪ್ರಕೃತಿ ಮೇಲೆ ಆದಂತಹ ಹಾನಿಯ ಬಗ್ಗೆಯೂ ಚಿತ್ರಿಸಲಾಗಿದೆ ಪರಿಸರ ಕಾಳಜಿಯ ಸಾಮಾಜಿಕ ಕಳಕಳಿಯ ಚಲನಚಿತ್ರ ಇದಾಗಿದ್ದು ಮನರಂಜನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.

ಒಂದು ಚಲನಚಿತ್ರ ಪ್ರೇಕ್ಷಕರನ್ನು ೨ ಗಂಟೆಯಲ್ಲಿ ಹೇಗೆ ರಂಜಿಸಬಹುದು ಎಂಬ ಬಗ್ಗೆ ಏನೆಲ್ಲಾ ಬೇಕಾಗುತ್ತ್ತದೆ ಎಂಬುದನ್ನು ಮನಗಂಡು ಈ ಚಿತ್ರದಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಾಗಿದೆ ಪ್ರಮುಖವಾಗಿ ಮಲೆನಾಡಿನ ಭಾ?ಯನ್ನು ಬಳಸಿಕೊಂಡಿರುವುದು ಶ್ಲಾಘನೀಯ ಎಂದರು.

ಪದವಿ ಪೂರ್ವ ಖ್ಯಾತಿಯ ನಟ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟ್ಟಿಸಿದ್ದು ಶೃಂಗೇರಿಯ ರಂಗ ಪ್ರತಿಭೆ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿಯ ನಟರಾಗಿದ್ದು ಈ ರಂಗ ಕಲಾವಿದರು ಅವರದೇ ಆದ ಧ್ವ್ವನಿ ನೀಡಿರುವುದು ಭಾ?ಯ ತೊಡಕು ನಿವಾರಣೆಗೆ ಸಹಕಾರಿಯಾಗಿದೆ ಎಂದು ವಿವರಿಸಿದರು.

ಇದೊಂದು ಮಲೆನಾಡು ಭಾ?ಯನ್ನು ಒಳಗೊಂಡ ಪ್ರಥಮ ಚಲನಚಿತ್ರ ಎಂಬ ಬಹಾಳ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ ಚಿಕ್ಕಮಗಳೂರು ಜಿಲ್ಲೆಯವರಾದ ಚಿತ್ರದ ತಾಂತ್ರಿಕ ವರ್ಗ ಶಶಿರ ಶೃಂಗೇರಿ ಛಾಯ ಗ್ರಹಣ, ಅವಿನಾಶ್ ಸಂಕಲನ, ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ, ಮಧುರ ವನಿತ ವೆಂಕಟೇಶ್ ಇವರ ಸಾಹಿತ್ಯವನ್ನು ಚಿತ್ರ ಒಳಗೊಂಡಿದೆ.

ಪರಿಸರ ಗೀತೆಯೊಂದನ್ನು ಚಿತ್ರಕ್ಕೆ ಅಳವಡಿಸಿದ್ದು ಅದನ್ನು ನಾಡಿನ ಪ್ರಸಿದ್ದ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ ಈ ಚಿತ್ರದಲ್ಲಿ ೩ ಹಾಡುಗಳನ್ನು ಪರಿಸರಕ್ಕೆ ಸಂಬಂಧಿಸಿದಂತೆ ರಚಿಸಲಾಗಿದೆ ಎಂದರು.

ರವೀಂದ್ರ ತುಂಬರಮನೆ ನಿರ್ಮಾಪಕರಾಗಿದ್ದು ಚಿಕ್ಕಮಗಳೂರಿನ ಕಲಾವಿದೆ ರೇಖಾ ಪ್ರೇಂ ಕುಮಾರ್ ಪೋ?ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ನಟಿ ನಾಗಶ್ರೀ ಬೇಗಾರ್, ಬಿ .ಎಲ್ ರವಿಕುಮಾರ್ ತೋರಣಗದ್ದೆ ಎ.ಎಸ್ ನಯನ ಮುಖ್ಯ ಭೂಮಿಕೆಯಲ್ಲಿದ್ದಾರೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರತಿದಿನ ಸಂಜೆ ೫:೩೦ಕ್ಕೆ ಒಂದು ಪ್ರದರ್ಶನ ಇರುತ್ತದೆ ಎಂದರು.

ರಾಜ್ಯದ್ಯಂತ ಅ.೧೩ ರಂದು ಬಿಡುಗಡೆಯಾಗಲಿರುವ ಜಲಪಾತ ಚಲನಚಿತ್ರ ಸುಮಾರು ೨೨ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಟಿ ರೇಖಾ ಪ್ರೇಂಕುಮಾರ್, ಸ.ಗಿರಿಜಾಶಂಕರ್, ನಟಿ ನಾಗಶ್ರೀ ಬೇಗಾರ್ ಚಿತ್ರದ ಪ್ರಮುಖ ಪಾತ್ರವಹಿಸಿ ನಿರ್ಮಾಣ, ನಿರ್ವಹಣೆ ಮಾಡಿರುವ ಕಾರ್ತಿಕ್ ಉಪಸ್ಥಿತರಿದ್ದರು.

Jalapāta movie release