ಶವೋಮಿ 11 ಯೂತ್ ವಿಟಾಲಿಟಿ ಆವೃತ್ತಿ (Xiaomi 11 Youth Vitality Edition) ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಭಾರತದ ಮಾರುಕಟ್ಟೆಗಲ್ಲ ಚೀನಾದ ಮಾರುಕಟ್ಟೆಗೆ. ಈ ಫೋನ್ ಹಲವು ವಿಶೇಷತೆಗಳಿಂದ ಕೂಡಿದ್ದು, ಡಿಸೆಂಬರ್ 10 ರಂದು ಚೀನಾದಲ್ಲಿ ಬಿಡುಗಡೆ ಆಗಿದೆ. ಇದು ಈಗಾಗಲೇ ಭಾರತದಲ್ಲಿ ಬಿಡುಗಡೆ ಆಗಿರುವ ಶಿಯೋಮಿ 11 ಲೈಟ್ 5ಜಿ ಎನ್ ಇ (Xiaomi 11 Lite 5G NE)ಯ ಅಪ್ ಡೇಟೆಡ್ ವರ್ಷನ್ ಎಂದೂ ಹೇಳಲಾಗುತ್ತದೆ.

ಸ್ಪೆಸಿಫಿಕೇಶನ್
ಡಿಸ್ಪ್ಲೇ: 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಶವೋಮಿ 11 ಯೂತ್ ವಿಟಾಲಿಟಿ ಹೊಂದಿದೆ.  ಕ್ಯಾಮೆರಾ: ಇದು ಟ್ರಿಪಲ್ ರೇರ್ ಕಾಮೆರ ಹೊಂದಿದ್ದ64 ಎಂ ಪಿ ಪ್ರೈಮರಿ ಹಾಗೂ 8 ಎಂ ಪಿ ಅಲ್ಟ್ರಾ ವಾಯ್ಡ್ ಶೂಟರ್ 5 ಎಂ ಪಿ ಮ್ಯಾಕ್ರೋ ಶೂಟರ್ ಹೊಂದಿದೆ. ಫ್ರಾಂಟ್ ಕ್ಯಾಮೆರಾ 20 ಎಂ ಪಿ ಹೊಂದಿದ್ದು ಸೆಲ್ಫಿ ಪ್ರಿಯರಿಗೆ ಇದು ಮೋಸ್ಟ್ ಫೇವರಿಟ್ ಆಗಲಿದೆ.

4250 ಎಂಎಎಚ್ ಬ್ಯಾಟರಿ ಹಾಗೂ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದಲ್ಲಿ2 ದಿನಗಳ ವರೆಗೆ ಬ್ಯಾಟರಿ ಬ್ಯಾಕ್ ಅಪ್ ಬರುತ್ತದೆ. 128 ಹಾಗೂ 256 ಇಂಟರ್ನಲ್ ಮೆಮೊರಿ ಸಾಮರ್ಥ್ಯದ ಎರಡು ಮಾಡೆಲ್‌ಗಳು ಲಭ್ಯವಿದೆ. ಇದರಿಂದಾಗಿ ಫಿಲ್ಮ್ ಹಾಗೂ ಫೋಟೋಗಳನ್ನು ಎಷ್ಟು ಬೇಕಾದರೂ ಸ್ಟೋರ್ ಮಾಡಲು ಸಾಧ್ಯ.

ಕನೆಕ್ಟಿವಿಟಿ: 5ಜಿ ಹಾಗೂ4ಜಿ ಎರಡನ್ನೂ ಈ ಫೋನ್ ಸಪೋರ್ಟ್ ಮಾಡುತ್ತಿದ್ದು, ವೈಫೈ, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್ ಸಿಯನ್ನು ಹೊಂದಿದೆ. ಇದು ಆಕ್ಟೋ-ಕೋರ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದರ ಜೊತೆಗೆ ಆಂಡ್ರಾಯ್ಡ್ ನ 11 ನೇ ವರ್ಷನ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಬೆಲೆ?
8 ಜಿ ಬಿ ರಾಂ ಹಾಗೂ 128 ಜಿ ಬಿ ಫೋನ್ ಗೆ 23800 ಹಾಗೂ 8 ಜಿ ಬಿ ರಾಂ ಹಾಗೂ 256 ಜಿ ಬಿ ಫೋನ್ ಬೆಲೆ 27300 ಆಗಿದೆ. ಪ್ರಸ್ತುತ ಕಪ್ಪು, ನೀಲಿ, ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿ ಸಿಗಲಿದೆ.

ಇದನ್ನೂ ಓದಿ: ಸೆಕೆಂಡ್‌ ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಂತಿದ್ದರೆ ಇದನ್ನೆಲ್ಲಾ ಗಮನಿಸಿ

(Xiaomi 11 Youth Vitality Edition smartphone released here is the specification details )