ಗ್ರೆನೋಬಲ್‌: ಫ್ರಾನ್ಸ್‌ನ ಮಾಂಟ್‌ ಬ್ಲಾಂಕ್‌ ಪರ್ವತಶ್ರೇಣಿಯಲ್ಲಿ ಐವತ್ತು ವರ್ಷದ ಹಿಂದೆ ಏರ್‌ ಇಂಡಿಯಾ ವಿಮಾನ ಪತನವಾಗಿದ್ದ ಸ್ಥಳದಲ್ಲಿ ಫ್ರಾನ್ಸ್‌  ಪರ್ವತಾರೋಹಿಗೆ ಪಚ್ಚೆ, ಮಾಣಿಕ್ಯ, ನೀಲಮಣಿಗಳು ಹರಳಿನ ಭಂಡಾರ 2013ರಲ್ಲಿ ದೊರಕಿತ್ತು. ಎಂಟು ವರ್ಷಗಳ ನಂತರ ಇವುಗಳನ್ನು ಸ್ಥಳೀಯ ಆಡಳಿತ ಮತ್ತು ಪರ್ವತಾರೋಹಿಗಳ ಮಧ್ಯೆ ಹಂಚಿಕೆ ಆಗಿದೆ.

ಸುಮಾರು 50 ವರ್ಷಗಳ ಹಿಂದೆ ನಿರ್ಜನ ಹಿಮಾವೃತ ಪ್ರದೇಶದಲ್ಲಿ ಏರ್‌ ಇಂಡಿಯಾದ ವಿಮಾನ1966ರಲ್ಲಿ ಪತನವಾಗಿತ್ತು. ಈ ಪರ್ವತವನ್ನು ಹತ್ತುತ್ತಿದ್ದ ಸಾಹಸಿಗರಿಗೆ ವಿಮಾನದ ಅವಶೇಷ, ಮಾನವ ದೇಹದ ಭಾಗಗಳು, ಬ್ಯಾಗೇಜ್‌ಗಳು ಸಿಗುತ್ತಿದ್ದವು.  ಆದರೆ, 2013ರಲ್ಲಿ ಪರ್ವತಾರೋಹಿಗಳ ತಂಡಕ್ಕೆ

ಒಂದು ಪೆಟ್ಟಿಗೆ ಕಾಣಿಸಿತು. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಅಮೂಲ್ಯವಾದ ಹರಳುಗಳು ಇದ್ದವು. ಈ ಹರಳುಗಳ ಈಗಿನ ಮೌಲ್ಯ 1.27 ಕೋಟಿ ರೂ. (1,69,000 ಡಾಲರ್‌).

ಈ ವಿವಾದವು ಎರಡೂ ಪಕ್ಷಗಳ ನಡುವೆ ಸೌಹಾರ್ದಯುತವಾಗಿ ಬಗೆಹರಿದಿರುವುದು ಸಂತಸಕರ. ಪರ್ವತಾರೋಹಿಗಳ ಹರಳುಗಳ ವಿಷಯದಲ್ಲಿ ತೋರಿದ ವರ್ತನೆ ಪ್ರಸಂಶನೀಯ ಎಂದು ಚಮೋನಿಕ್ಸ್‌ ನಗರದ ಮೇಯರ್‌ ಎರಿಕ್‌ ಫೋರ್ನಿಯರ್ ಹೇಳಿದ್ದಾರೆ.

ವಿಮಾನ ಪತನವಾಗಿದ್ದ ಸ್ಥಳದಲ್ಲಿ 2012ರಲ್ಲಿ ದೊರಕಿದ್ದ ಕಾಂಚನಜುಂಗಾ ರಾಜತಾಂತ್ರಿಕ ಅಂಚೆ ಚೀಲವನ್ನು ಫ್ರಾನ್ಸ್‌ನಿಂದ ಭಾರತ ವಾಪಸು ಪಡೆದುಕೊಂಡಿತ್ತು. 1966ರ ಜನವರಿ 24ರಂದು ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನ ಮಾಂಟ್‌ ಬ್ಲಾಂಕ್‌ ಪರ್ವತಶ್ರೇಣಿಯಲ್ಲಿ ಪತನಗೊಂಡಿತು. 117 ಮಂದಿ ಸಾವನ್ನಪ್ಪಿದ್ದರು. ಪರಮಾಣು ವಿಜ್ಞಾನಿ ಹೋಮಿ ಜಹಂಗೀರ್‌ ಭಾಭಾ ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದರು.

French Climber Allowed To Keep Gems Found In 2013 At Air India Crash Site

ಇದನ್ನು ಓದಿ: ಸಾಧಾರಣರಾಗಿದ್ದರೂ ಪರವಾಗಿಲ್ಲ, ಭರವಸೆ ಕಳೆದುಕೊಳ್ಳ ಬೇಡಿ ಎಂದ ಗಾಯಾಳು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌

ಇದನ್ನೂ ಓದಿ: ಪುರಾತನ ಕ್ಯಾಟ್-ಐ ರತ್ನದ ಹರಳು ವಶಕ್ಕೆ