ಚಿಕ್ಕಮಗಳೂರು,(ಕನ್ನಡನಾಡಿಸುದ್ದಿ ಜಾಲ): ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರವ್ ಚೋಪ್ರಾ ಅವರಿಗೆ ಕರುನಾಡಿನ ಕೆ ಎಸ್ ಆರ್ ಟಿಸಿ ಗೋಲ್ಡನ್ ಪಾಸ್ ನೀಡಿ ಗೌರವಿಸಿದೆ.  ಆ ಮೂಲಕ ಕನ್ನಡಿಗರ ಔದಾರ್ಯ ಮೆರೆದಿದೆ.  ಆ ಮೂಲಕ ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಸಿ, ವಿಶೇಷ ಸವಲತ್ತು ಒದಗಿಸಿದೆ.

ನೂರು ವರ್ಷಗಳ ಬಳಿಕ ಭಾರತಕ್ಕೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡ ಕ್ರೀಡಾಪಟು ನೀರಜ್ ಅವರಿಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದಿದೆ.  ಜೊತೆಗೆ ಹರಿಯಾಣದ ಸರ್ಕಾರ, ಬಿಸಿಸಿಐ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೇರಿದಂತೆ ಅನೇಕ ಕಡೆಗಳಿಂದ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕೆಎಸ್ ಆರ್ ಟಿಸಿ ತನ್ನ ಘೋಷಣೆಯನ್ನು ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಪಡಿಸಿದೆ.

ಗೋಲ್ಡನ್ ಪಾಸ್ ವಿಶೇಷತೆ : ಕೆಎಸ್ ಆರ್ ಟಿಸಿ ನಿಗಮದ ಯಾವುದೇ ಬಸ್ ನಲ್ಲಿ ರಾಜ್ಯ ಮತ್ತು ಅಂತರಾ ರಾಜ್ಯದಲ್ಲಿ ಜೀವಿತಾವಧಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.   ಈ ವಿಚಾರವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ. ಕಳಸದ ಭಾಆಸೇ ಇವರು ತಿಳಿಸಿದ್ದಾರೆ.

ಅದಿತಿ ಅಶೋಕ್ ಅವರಿಗೆ ಉಚಿತ ಪಾಸ್:  ಗಾಲ್ಫ್ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕನ್ನಡ ನಾಡಿನ ಬಾಗಲಕೋಟೆ ಜಿಲ್ಲೆಯ ಕುವರಿ ಅದಿತಿ ಅವರಿಗೆ ಕೆಎಸ್ ಆರ್ ಟಿಸಿ ಉಚಿತ ಪಾಸ್ ಘೋಷಿಸಿದೆ.  ಆ ಮೂಲಕ ಅರ್ಜುನ ಪ್ರಶಸ್ತಿ ವಿಜೇತೆಗೆ ಗೌರವ ಸೂಚಿಸಿದೆ.