ಚಿಕ್ಕಮಗಳೂರು,(ಕನ್ನಡನಾಡಿಸುದ್ದಿ ಜಾಲ):  ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ ಹಾಗೂ  ಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ದುರಸ್ಥಿಗೊಳಿಸಿ ಜನರ ಒಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ಸೂಚಿಸಿದರು.

ಅವರು ನಗರದ ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕೋವಿಡ್ -೧೯ ಹಾಗೂ ವಿಪತ್ತು ನಿರ್ವಹಣಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಸ್ತೆಗಳ ಅಕ್ಕಪಕ್ಕದಲ್ಲಿ ಹಾಗೂ ವಿದ್ಯುತ್ ತಂತಿಯ ಮೇಲೆ ಬೀಳುವ ಹಂತದಲ್ಲಿರುವಂತಹ ಮರಗಳನ್ನು ತೆರವುಗೊಳಿಸುವ ಮೂಲಕ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ  ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಹವಮಾನ ಆಧಾರಿತ ವಿಮೆಯಿಂದ ಯಾವೊಬ್ಬ ರೈತರು ವಂಚಿತರಾಗದಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ರೈತರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದ ಅವರು ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ನಿರ್ದಿ?ವಾದ ಅಂಕಿಅಂಶಗಳ ಮಾಹಿತಿಯ ವರದಿಯನ್ನು ಸಲ್ಲಿಸಬೇಕು ಹಾಗೂ ಪ್ರವಾಹದ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಬಗ್ಗೆ ತಹಸಿಲ್ದಾರ್‌ಗಳು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಅತಿಯಾದ ಮಳೆಯಿಂದಾಗಿ ಮಲೆನಾಡು ಪ್ರದೇಶಗಳಲ್ಲಿ  ಭೂಕುಸಿತ ವಾಗಿ ಜಿಲ್ಲೆಯ ಕೃಷಿಯಲ್ಲಿ ಒಟ್ಟು ೧೨೪.೧ ಎಕ್ಟೆರ್ ತೋಟಗಾರಿಕೆಗೆ ಸಂಬಂಧಿಸಿದಂತೆ ೩೨೫ ಎಕ್ಟೆರ್   ಪ್ರದೇಶವು ಹಾನಿಗೊಳಗಾಗಿರುವುದರ ಪ್ರದೇಶಗಳ  ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸಿದ ಅವರು ಬಿತ್ತನೆ ಬೀಜ ಕಳೆದುಕೊಂಡ ರೈತರಿಗೆ ಬಿತ್ತನೆ ಬೀಜವನ್ನು  ನೀಡಲು ಅಗತ್ಯ ಕ್ರಮ ವಹಿಸಬೇಕು ಹಾಗೂ ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರಿಗೆ ಧೈರ್ಯ ತುಂಬುವಂತಹ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದ ಅವರು ಜಿಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಸೂಕ್ತವಾದ ನಿಯಮಗಳನ್ನು ಜಾರಿಗೊಳಿಸಬೇಕು ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಕೋವಿಡ್-೧೯ ಸೋಂಕಿಗೆ ತುತ್ತಾಗಿ ಮರಣ ಹೊಂದಿದವರ ಕುಟುಂಬದವರಿಗೆ ಸರ್ಕಾರವು ಪರಿಹಾರ ಹಣ ನೀಡುತ್ತಿದ್ದು ಎಲ್ಲರಿಗೂ ತಲುಪುವಂತೆ ಕ್ರಮವಹಿಸಿ ಎಂದ ಅವರು ಮೂರನೇ ಅಲೆಯು ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಹೆಚ್ಚರ ವಹಿಸಬೇಕಲ್ಲದೆ ಕಡ್ಡಾಯವಾಗಿ ಆರ್.ಟಿ.ಸಿ.ಪಿ.ಆರ್ ಟೆಸ್ಟ್ ನ್ನು ಮಾಡಿರುವ ಕುರಿತು  ಪರಿಶೀಲಿಸಿ ಕ್ರಮವಹಿಸಬೇಕು ಎಂದರು.

ಜನರ ಅತಿಯಾದ ನಿರ್ಲಕ್ಷದಿಂದ ಗ್ರಾಮೀಣ ಭಾಗದಲ್ಲಿ  ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ   ಟಾಸ್ಕ್ ಪೋರ್ಸ್ ಸಮಿತಿಯನ್ನು ಬಿಗಿ ಮಾಡಬೇಕು ಎಂದ ಅವರು ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದು  ಜನರಲ್ಲಿ ರೋಗ ಗುಣ ಲಕ್ಷಣಗಳನ್ನು ಗುರುತಿಸಿ ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚು ಅತಿವೃಷ್ಠಿಗೆ ಸಿಲುಕುತ್ತಿರುವುದು  ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿದ್ದು,  ಶಾಶ್ವತ ಕಾಮಗಾರಿ ಮಾಡಿದರೆ ಅನಾಹುತ ತಪ್ಪಿಸಲು ಸಾಧ್ಯ ಎಂದ ಅವರು  ತಗ್ಗುಪ್ರದೇಶದ ಜನರನ್ನು ಸ್ಥಳಾಂತರಿಸಬೇಕು ಎಂದು ಸಲಹೆ ನೀಡಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ ಎರಡು ವ?ದಿಂದ ಪ್ರವಾಹದಲ್ಲಿ ಸಿಲುಕಿರುವವರಿಗೆ ಇವರೆಗೂ ಪೂರ್ಣ ಪರಿಹಾರ ದೊರೆತಿಲ್ಲ, ಮನೆ ಕಳೆದುಕೊಂಡವರಿಗೆ ಮನೆಗಳು ದೊರೆತಿಲ್ಲ. ಭೂ ಕುಸಿತದಿಂದಾಗಿ ಭೂಮಿಗಳನ್ನು  ಕಳೆದುಕೊಂಡವರಿಗೆ ಭೂಮಿ ಸಿಕ್ಕಿಲ್ಲ ಇದಕ್ಕೆ ಪರಿಹಾರ ದೊರಕಿಸಿ ಎಂದ ಅವರು ಚಾರ್ಮಾಡಿ ಘಾಟ್‌ನಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಹೆಚ್ಚು ವಾಹನಗಳು ಪ್ರಯಾಣ ಬೆಳೆಸುತ್ತಿವೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದರು.

ವಿಧಾನಪರಿತ್ ಸದಸ್ಯ ಎಸ್.ಎಲ್ ಬೋಜೇಗೌಡ ಮಾತನಾಡಿ ಶಾಲಾ ಕಾಲೇಜು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಮಳೆಯಿಂದ ಸೋರುತ್ತಿವೆ, ಸರ್ಕಾರದಿಂದ ನೀಡುತ್ತಿರುವ ಅನುದಾನ ಕಟ್ಟಡಗಳ ದುರಸ್ಥಿಗೆ ಸಾಕಾಗುವುದಿಲ್ಲ, ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಚಿಕ್ಕಮಗಳೂರು ಭಾಗಗಳು ಮಳೆಗಾಲದಲ್ಲಿ  ಪ್ರವಾಹವಾಗುವ ಸಂಭವ ಹೆಚ್ಚಿದ್ದು, ಈ ಬಾರಿಯ ಭಾರಿ ಮಳೆಗೆ ೧೭ ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ೨೯೭ ಮನೆಗಳು ಭಾಗಶಃ ಹಾನಿಯಾಗಿವೆ, ಜಾನುವಾರುಗಳು ಮರಣ ಹೊಂದಿವೆ, ೧೨೬ ಎಕ್ಟೆರ್  ತೋಟಗಾರಿಕೆ ೩೨೫ ಎಕ್ಟೆರ್ ನಲ್ಲಿ ಕೃಷಿ ಬೆಳೆಗಳು ನಾಶವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ೪೦೫ ಕಿಲೋಮೀಟರ್ ರಸ್ತೆಗಳು ಹಾನಿಯಾಗಿ ೫೨ ಕೋಟಿ ನ?ವಾಗಿದೆ, ೨೧ ಕೋಟಿ ರೂ ಮೊತ್ತದ? ಸೇತುವೆಗಳು ಹಾನಿಯಾಗಿವೆ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ೧೨೨೦ ಕಿಲೋಮೀಟರ್ ರಸ್ತೆ ಹಾನಿಯಾಗಿ ೧೦೩ ಕೋಟಿ ನ?ವಾಗಿದೆ ಒಟ್ಟಾರೆ ೧೫೦  ಕೋಟಿಗೂ ಅಧಿಕ ನ? ಸಂಭವಿಸಿದೆ, ೧೦೮ ಗ್ರಾಮಗಳನ್ನು ಅತಿವೃಷ್ಠಿ ಸಂಭವಿಸಬಹುದಾದ ಗ್ರಾಮಗಳೆಂದು ಗುರುತಿಸಲಾಗಿದೆ ೫೮ ಕಡೆ ಧರೆ ಕುಸಿಯುವ ಸ್ಥಳಗಳೆಂದು ಹಾಗೂ ಮೂರು ಕಡೆ ನೀರು ಬ್ಲಾಕ್ ಆಗಬಹುದಾದ ಸ್ಥಳವೆಂದು ಗುರುತಿಸಲಾಗಿದೆ. ಬಾಳೆಹೊನ್ನೂರು ಕಳಸ ಜಯಪುರ ರಸ್ತೆ ಸಂಪರ್ಕ ಕಡಿತ ಗೊಳ್ಳಬಹುದು ಇದಕ್ಕೆ ಪರ್ಯಾಯ ರಸ್ತೆಯನ್ನು ಕಂಡುಕೊಳ್ಳಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ವಿಪತ್ತಿನ ಸಮಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಎಟಿಐ ವತಿಯಿಂದ ತರಬೇತಿ ನೀಡಲಾಗಿದೆ ಹಾಗೂ ರಸ್ತೆ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗಿದೆ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ೨೪*೭ ಕರ್ತವ್ಯ ನಿರ್ವಹಿಸಲು ವಿಪತ್ತು ನಿರ್ವಹಣ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಹಾಗೂ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ವಾಟ್ಸಪ್ ಗ್ರೂಪ್ ರಚಿಸಿಕೊಂಡು ವಾನಿಂಗ್ ಮತ್ತು ಅಲರ್ಟ್‌ಗಳನ್ನು ಕಾಲಕಾಲಕ್ಕೆ ತಿಳಿಸಲಾಗುತ್ತಿದೆ.

ಕೋವಿಡ್ ಪರೀಕ್ಷೆ ಹೆಚ್ಚಿಸಲು ವೈದ್ಯರಿಗೆ ಸೂಚಿಸಲಾಗಿದೆ, ಸೋಂಕಿತರನ್ನು ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತಿದೆ ಮೂರ್ನಾಲ್ಕು ದಿನಗಳಿಂದ  ನಿಯಂತ್ರಣಕ್ಕೆ ಬರುತ್ತಿದೆ ಕೇರಳದಿಂದ ಬಂದಂತಹ ವ್ಯಕ್ತಿಗಳನ್ನು  ೧೪ ದಿನಗಳ ಕಾಲ ಕ್ವಾರಂಟೈನ್ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನ ಪರಿ?ತ್ ಉಪಸಭಾಪತಿ ಎಮ್.ಕೆ ಪ್ರಾಣೇಶ್, ಜಿಲ್ಲಾ ಪೊಲೀಸ್ ವರಿ?ಧಿಕಾರಿ  ಎಂ.ಎಚ್ ಅಕ್ಷಯ್,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ. ಉಪವಿಭಾಗಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಸೇರಿದಂತೆ ಮತ್ತಿತರ ಅಧಿಕಾರಿಗಳು  ಉಪಸ್ಥಿತರಿದ್ದರು