ಬೆಂಗಳೂರು:  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ಪ್ರವಾಸಿಗರ ಎಸ್‌ಯುವಿ ವಾಹನವನ್ನು ಕಚ್ಚಿ ಎಳೆದಾಡಿದೆ. ಇದರಿಂದ ಅದರಲ್ಲಿದ್ದ ಪ್ರವಾಸಿಗರು ಗಾಬರಿಗೊಂಡಿದ್ದರು.  ಈ ವಿಡಿಯೋವನ್ನು ಉದ್ಯಮಿ ಆನಂದ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿದೆ.

‘ಮಹೇಂದ್ರಾ ಕ್ಸೈಲೋ ವಾಹನ ಬಹುಶಃ ಹೆಬ್ಬುಲಿಗೆ ಅದು ರಚಿಕರವಾಗಿ ಕಂಡಿರಬೇಕು’ ಎಂದು ಈ ವಾಹನವನ್ನು ತಯಾರಿಸುವ ಮಹೀಂದ್ರ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೇಂದ್ರ ಅಡಿ ಟಿಪ್ಪಣಿ ಬರೆದಿರುವುದು ಜಾಲತಾಣದಲ್ಲಿ ಗಮನ ಸೆಳೆದಿದೆ.

ಕ್ಸೈಲೋ ಎಸ್‌ಯುವಿ ವಾಹನದ ಹಿಂಬದಿಯ ಟೈರ್‌ನ ಬಂಪರ್‌ನನ್ನು ಕಚ್ಚಿ ಎಳೆದ ಹುಲಿರಾಯನ ರಭಸಕ್ಕೆ ವಾಹದಲ್ಲಿದ್ದ ಪ್ರವಾಸಿಗರು ಆತಂಕಗೊಂಡು ಕಿರುಚಾಡಿದರು.

ಇನ್ನೊಂದು ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು, ಈ ದೃಶ್ಯವನ್ನು ಕಂಡು ಹೌಹಾರಿದ್ದಾರೆ.

ಈ ಘಟನೆ ಕಳೆದ ನವೆಂಬರ್‌ನಲ್ಲಿ ನಡೆದಿದ್ದು. ಕ್ಸೈಲೋ ವಾಹನ ಕೆಟ್ಟು ನಿಂತಿತ್ತು. ಆಗ ಪ್ರತ್ಯಕ್ಷವಾದ ಹುಲಿ ಅದನ್ನು ಎಳೆದಾಡಿತು ಎಂದು ಆ ವಾಹನದಲ್ಲಿದ್ದ ಪ್ರವಾಸಿಗ ಯಶ್‌ ಶಾ ಹೇಳಿದ್ದಾರೆ. ಹುಲಿರಾಯ ಕಾರಿನ ಮೇಲೆ ಮಾಡಿದ ಈ ದಾಳಿಯ ಇನ್ನೊಂದು ಕೋನದ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.

ವೈರಲ್‌ ಆಗಿರುವ ಈ ಚಿತ್ರವನ್ನು ನಾಲ್ಕು ಲಕ್ಷ ಜನರು ನೋಡಿದ್ದಾರೆ.  ಅನೇಕ ಕಾಮೆಂಟ್‌ ಹಾಕಿದ್ದಾರೆ.

ವನ್ಯಮೃಗಗಳಲ್ಲಿ ಹುಲಿಗಳು ಅತ್ಯಂತ ಶಕ್ತಿಶಾಲಿ ಪ್ರಾಣಿಯಾಗಿದ್ದು, ಇದರ ಕಚ್ಚುವಿಕೆ ಸಿಂಹಕ್ಕಿಂತ ಎರಡು ಪಟ್ಟು ಹೆಚ್ಚು. ಪ್ರತಿ ಚದರ ಅಂಗಲಕ್ಕೆ ಇದರ ಕಚ್ಚುವಿಕೆ ಸಾವಿರ ಪೌಂಡ್‌ಗಳಿಗಿಂತ ಅಧಿಕ.

Tiger Pulls SUV Full Of Tourists In Bannerghatta

ಇದನ್ನು ಓದಿ: ಮಗುವಿನ ಲಿಂಗ ಬಹಿರಂಗಪಡಿಸಲು ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಂಡ ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಇದನ್ನೂ ಓದಿ: Uttarakhand: ಉತ್ತರಾಖಂಡದ ವನ್ಯಜೀವಿ ಧಾಮದಲ್ಲಿ ಎತ್ತರಿಸಿದ ರಸ್ತೆ ಮಾರ್ಗದ ಶಂಕುಸ್ಥಾಪನೆ