ಬೆಂಗಳೂರು: ಕೊರೊನಾ ಕಾಟ ಹಾಗೂ ಮಹಾ ಮಳೆಯ ಹೊಡೆತದಿಂದ ಚೇತರಿಸಿಕೊಳ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಮೇಲೆ ನೇರವಾಗಿ ಆಲಿಕಲ್ಲು ಚಪ್ಪಡಿ ಎಳೆದಿದ್ದರೆ, ನೂರಾರು ಎಕರೆ ದ್ರಾಕ್ಷಿ ತೋಟದಲ್ಲಿ ಹಾಳಾಗಿದೆ. ಇನ್ನು ಅಳಿದುಳಿದ ದ್ರಾಕ್ಷಿಗೂ… ಈಗ ಬೆಲೆ ಇಲ್ಲದಂತಾಗಿದ್ದು, ರೈತರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.

ಆ ಜಿಲ್ಲೆಯ ರೈತರು ಸಿಲ್ಕ್ ಮಿಲ್ಕ್ ತರಕಾರಿ ಹಣ್ಣು ಹಂಪಲ ಸೇರಿದಂತೆ ದ್ರಾಕ್ಷಿ ಬೆಳೆಯನ್ನೆ ನಂಬಿಕೊಂಡು ಜೀವನ ಸಾಗಿಸ್ತಾರೆ. ಇನ್ನು ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸುರಿದ ಮಹಾ ಮಳೆಯ ಹೊಡೆತವನ್ನು ಇನ್ನೂ ಸುಧಾರಿಸಿಕೊಳ್ಳಲು ಆಗಿಲ್ಲ, ಅಂಥದರಲ್ಲಿ ಹಗಲು ರಾತ್ರಿ ಕಷ್ಟ ಪಟ್ಟು ಉತ್ತಮ ತಳಿಯ ದ್ರಾಕ್ಷಿ ಫಸಲು ಬೆಳೆದಿದ್ದರು. ಇನ್ನೇನು ಕಟಾವು ಮಾಡಿ ಮಾರ್ಕೆಟ್ ಗೆ ಹಾಕಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ದ್ರಾಕ್ಷಿ ಬೆಲೆ ಕುಸಿದಿದೆ, ಇದ್ರಿಂದ ಕಂಗಲಾಗಿರುವ ರೈತರು ಮಾಡಿದ ಬೆಳೆ ಸಾಲ ತೀರಿಸೋದು ಹೇಗೆ ಅನ್ನೊ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರದಿ ನೋಡಿ

9,375 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ:
ಕೈ ಕೆಸರಾದ್ರೆ ಬಾಯಿ ಮೊಸರು ಅನ್ನೊ ಹಾಗೆ… ಪಾತಾಳದಿಂದ ಹನಿ ಹನಿ ನೀರು ಬಸಿದು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ವಿನೂತನ ಮಾದರಿಯಲ್ಲಿ ಹನಿ ನೀರಾವರಿಯನ್ನೆ ನಂಬಿಕೊಂಡು ಜಿಲ್ಲೆಯಾದ್ಯಂತ 9,375 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆದ್ರೆ ಈ ಬಾರಿ ಉತ್ತಮ ದ್ರಾಕ್ಷಿ ಫಸಲು ಬಂದಿದೆ. ಇನ್ನೇನು ದ್ರಾಕ್ಷಿ ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು ಆದ್ರೆ ಅಷ್ಟರಲ್ಲಿ ಪಸ್ತುತ ದ್ರಾಕ್ಷಿ ಹಣ್ಣಿನ ಬೆಲೆ ಕುಸಿದಿದೆ. ಕೆ.ಜಿ. ದಿಲ್ ಖುಷ್ ದ್ರಾಕ್ಷಿಯ ಬೆಲೆ ಕೇವಲ 15 ರೂಪಾಯಿಯಿಂದ 20 ರೂಪಾಯಿಗೆ ಮಾತ್ರ ಮಾರಾಟವಾಗ್ತಿದೆ. ಇನ್ನು ದುಬಾರಿ ನಿರ್ವಾಹಣೆಗೆ ಹೆಸರಾಗಿರುವ ಶರತ್, ರೆಡ್ ಗ್ಲೋಬ್, ಸುಪರ್ ಸೋನಾಲಿಕಾ ದ್ರಾಕ್ಷಿಗೂ ಬೇಡಿಕೆ ಕಡಿಮೆಯಾಗಿದ್ದು… ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಗೂಣೂರು ನಿವಾಸಿ ವೆಂಕಟೇಶ ಅನ್ನೊ ರೈತ, ತನ್ನ ಒಂದೂವರೆ ಎಕೆರೆ ಜಮೀನಿನಲ್ಲಿ ದಿಲ್ ಖುಷ್ ತಳಿಯ ದ್ರಾಕ್ಷಿ ಬೆಳೆದಿದ್ದು, ದ್ರಾಕ್ಷಿ ತೋಟ ನಿರ್ವಹಣೆಗೆ ಬರೋಬ್ಬರಿ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ತೋಟದಲ್ಲಿ ಅತ್ಯುತ್ತಮ ಕ್ವಾಲಿಟಿ ಗ್ರೇಪ್ಸ್ ಸಹ ಬಂದಿದೆ. ಕೆ.ಜಿ. ದ್ರಾಕ್ಷಿಗೆ ಕನಿಷ್ಠ 50 ರೂಪಾಯಿ ಸಿಕ್ಕರೆ… ಹಾಕಿದ ಬಂಡವಾಳ ವರ್ಕ್ ಔಟ್ ಆಗುತ್ತೆ, ಆದ್ರೆ ಈಗ ಕೆ.ಜಿ. ದ್ರಾಕ್ಷಿಗೆ ಕೇವಲ 20 ರೂಪಾಯಿಗೆ ಮಾರಾಟ ಮಾಡಿದ್ದಾನೆ.