ಕನ್ನಡನಾಡಿ ಸುದ್ದಿಜಾಲ: ಇಂದು ವಿಶ್ವ ಛಾಯಾಗ್ರಹಣ ದಿವಸ.  ರವಿ ಕಾಣದ್ದನ್ನು ಛಾಯಾಗ್ರಾಹಕ ಕಾಣಿಸುವಂತೆ ಮಾಡುತ್ತಾನೆ. ಚಿಕ್ಕಮಗಳೂರು ಬೆಸ್ಟ್ ಫೊಟೋಗ್ರಫಿ ಸ್ಪಾಟ್ ಅನ್ನೋದ್ರಲ್ಲಿ ಯಾವ ಅನುಮಾನನೂ ಇಲ್ಲ.

ಚಿಕ್ಕಮಗಳೂರಿನ ಬಳಿಯ ಮೇಲ್ ಗಿರಿ ಮುಳ್ಳಪ್ಪಸ್ವಾಮಿ ದೇವಾಲಯ, ಸೀತಾಳಯ್ಯ ದೇವಾಲಯಗಳ ಪ್ರದೇಶಗಳು, ಮುಗಿಲು ಮುಟ್ಟುವ ಹಸಿರು ಗಿರಿ ಕಾನನಗಳಿಂದ ಫೋಟೋಗ್ರಾಫರ್ ಗಳಿಗೆ ಥ್ರಿಲ್ ಕೊಡೋ ಫೋಟೋಸ್ ತೆಗೆಯುವ ಹಾಟ್ ಸ್ಪಾಟ್ ಆಗಿದೆ.

ಮಾಣಿಕ್ಯಾಧಾರ,ಹೊನ್ನಮ್ಮನ ಹಳ್ಳ, ಹೆಬ್ಬೆ ಫಾಲ್ಸ್, ಕಿಗ್ಗಾ ಬಳಿ ಫಾಲ್ಸ್ ಹೀಗೆ ಜಿಲ್ಲೆ ಸುತ್ತಾ ಮುತ್ತಾ ನೀರಿನ ಆಸರೆಗಳು ವರ್ಷಾದ್ಯಂತ ಝರಿ ಸೃಷ್ಟಿ ಮಾಡುತ್ವೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವು ಸಹ ಫೋಟೋಗ್ರಾಫರ್ ಗಳಿಗೆ ಹೇಳಿ ಮಾಡಿಸಿದ ಸ್ಥಳ.  ಅಲ್ಲಿನ ಅತಿ ಎತ್ತರದ ಶಿಖರಗಳನ್ನು ಏರಿ ನಿಲ್ಲುವುದು, ಫೋಟೋ ತೆಗೆಯುವುದು ಒಳ್ಳೇ ಹವ್ಯಾಸಿಗಳಿಗೆ ಖುಷಿ ಕೊಡುತ್ತೆ.

ಐತಿಹಾಸಿಕ, ವಾಸ್ತುಶಿಲ್ಪದ ಸ್ಥಳಗಳಿಗಂತೂ ನಮ್ಮ ಜಿಲ್ಲೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಇವೆ.  ಅಂಬಳೆಯಲ್ಲಿರುವ ರುಕ್ಮಿಣಿ ಸತ್ಯಭಾಮ ಸಮೇತ ಗೋಪಾಲಸ್ವಾಮಿ ವಿಗ್ರಹ, ಹಿರೇಮಗಳೂರು ಕೋದಂಡರಾಮನ ಅಭಯ ಮೂರ್ತಿಗಳು ಮಂತ್ರ ಮುಗ್ದವಾಗಿಸಿವ ಶಕ್ತಿ ಹೊಂದಿದೆ.

ಚೋಳರ, ಹೊಯ್ಸಳರ, ಗಂಗರ, ಕದಂಬರ ಕಾಲದ ಅಪರೂಪದ ದೇವಾಲಯಗಳು ನಮ್ಮ ಜಿಲ್ಲೆಯಲ್ಲಿವೆ.. ಅಮೃತೇಶ್ವರ ದೇವಾಲಯ, ಕಳಸೇಶ್ವರ ದೇವಾಲಯ, ಮರ್ಲೆ ಹೊಸಳ್ಳಿ ಈಶ್ವರ- ವಿಷ್ಣು ದೇಗುಲಗಳು ಫೋಟೋಗ್ರಾಫಿ ಮಾಡಲು ವಿಶೇಷ ತಾಣಗಳಾಗಿವೆ.

ಹೊಯ್ಸಳರ ತವರೂರಾದ ಮೂಡಿಗೆರೆಯ ಅಂಗಡಿ ಗ್ರಾಮದಿಂದ ಹಿಡಿದು ಜಿಲ್ಲೆಯಾದ್ಯಂ ಮಲೆನಾಡು, ಬಯಲು ಸೀಮೆ ಎಲ್ಲೆಡೆಯೂ ಜಿಲ್ಲೆಯ ಅಧಿಕೃತತೆ ಸಾರುವ ಸೂಪರ್ ಸ್ಥಳಗಳ ಕಾಣಸಿಗುತ್ತವೆ. ಜಿಲ್ಲೆಯ ಪರಿಸರ ಸಂಪತ್ತು, ವನ್ಯಜೀವಿ ಸಂಪತ್ತು, ಜನ ಜೀವನ ಎಲ್ಲವೂ ಫೋಟೋಗ್ರಫಿಯಲ್ಲಿ ಒಡಮೂಡಿ ಜಿಲ್ಲೆಯ ಪಡಿಯಚ್ಚು ಮೂಡಿಸುತ್ತವೆ.

ಬಿಳಿ ಷೂ ಹಾಕಿಕೊಂಡ ಕಾಡೆಮ್ಮೆ ಫೋಟೋ ನೋಡಿದ ಒಡನೆ ಇವು ಕುದುರೆಮುಖ, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಿಗುವ ಕಾಡೆಮ್ಮೆ ಎಂಬುದು ಪರಿಸರ ಪ್ರೇಮಿಗಳಿಗೆ ತಕ್ಷ ಹೊಳೆಯುತ್ತದೆ.  ಹೀಗೆ ಜಿಲ್ಲೆಯ ಪ್ರಾದೇಶಿಕತೆ ಸಹ ಫೋಟೋಗ್ರಫಿಯಲ್ಲಿ ಅಡಕವಾಗಿರುತ್ತದೆ.

ನಳಿನ ಡಿ