ಬೆಂಗಳೂರು (ಕನ್ನಡನಾಡಿ ಸುದ್ದಿ ಜಾಲ) ಸಚಿವ ಸಂಪುಟ ಅಧಿಕಾರ ವಹಿಸಿದ ಬೆನ್ನಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಹಿ ಹಾಕುವ ಮೂಲಕ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಇದರ ಫಲಿತಾಂಶವಾಗಿ ೨೦೨೧-೨೨ನೇ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದ್ದು, ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪದವಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬಿ.ಎ ಅಥವಾ ಬಿಎಸ್ಸಿ ಕಲಿಯುವಾಗ ಎರಡೂ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಅಂತಿಮ ವರ್ಷದಲ್ಲಿ ಒಂದನ್ನು ಮೇಜರ್ ಅಥವಾ ಎರಡನ್ನೂ ಸಹ ಮೇಜರ್ ಆಗಿ ಕಲಿಯಬಹುದಾಗಿದೆ.  ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಷಯಗಳ ಜೊತೆಗೆ ಕನ್ನಡ, ಮತ್ತೊಂದು ಭಾಷಾ ವಿಷಯವನ್ನು ಪ್ರೋಗ್ರಾಂ ಪರಿಕ್ರಮಕ್ಕೆ ಅನುಗುಣವಾಗಿ ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಬಹುದು ಅಲ್ಲದೆ ಬಹುಶಿಸ್ತೀಯ ವಿಷಯಗಳ ಆಯ್ಕೆ ಮಾಡಬಹುದಾಗಿದೆ.

ಪಿಯುಸಿ/೧೦+೨ ಕಲಿಯದ ವಿದ್ಯಾರ್ಥಿಗಳು ಅಥವಾ ಕನ್ನಡ ಮಾತೃಭಾಷೆ ಅಲ್ಲದವರಿಗೆ ಕನ್ನಡವನ್ನು ಪ್ರತ್ಯೇಕವಾದ ಪಠ್ಯದಲ್ಲಿ ಕಲಿಯುವ ಅವಕಾಶ ಇದೆ.  ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಅನ್ಯ ಭಾಷೆಯೊಂದನ್ನು  ಬಹು ಶಿಸ್ತೀಯ ನೆಲೆಯಲ್ಲಿ ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಬಹುದು.

ವಿಷಯಾಧಾರಿತ ಅಧ್ಯಯನ ಗಳಾದ ಬಿಕಾಂ, ಬಿಸಿಎ, ಬಿಬಿಎ, ಬಿವಿಎ, ಬಿಪಿಎ ಮೊದಲಾದ ಕೋರ್ಸ್‌ಗಳಿಗೆ  ವಿಷಯಗಳನ್ನು ಬಹುಶಿಸ್ತೀಯ ಆಯ್ಕೆ ಮಾಡುವ ಅಗತ್ಯವಿರುವುದಿಲ್ಲ.

ವಿದ್ಯಾರ್ಥಿಗಳು ಪ್ರಥಮ ವರ್ಷದ ರಾಷ್ಟ್ರೀಯ ಕುಶಲತ ಅರ್ಯತಾ ಚೌಕಟ್ಟಿನ ೫ ನೇ ಹಂತದ ನಿಗದಿತ ಪಠ್ಯವನ್ನು ಅಧ್ಯಯನ ಮಾಡಿದ್ದು,  ಅವಶ್ಯಕ ಅಂಕಗಳನ್ನು ಗಳಿಸಿ ಅಧ್ಯಯನದಿಂದ ನಿರ್ಗಮಿಸಿದ್ದಲ್ಲಿ  ಡಿಪ್ಲೊಮಾ ನೀಡತಕ್ಕದ್ದು.

ವಿದ್ಯಾರ್ಥಿಗಳು ಮೂರನೇ ವರ್ಷದ ಅಧ್ಯಯನ ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ ೩ ನೇ ಹಂತದ ನಿಗದಿತ ಪಠ್ಯ ವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿದರೆ ಪದವಿ ನೀಡುವುದು.

ವಿದ್ಯಾರ್ಥಿಗಳು ತಮ್ಮ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯ ವಿದ್ದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ ೮ ನೇ ಹಂತದ ಅಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರೆಸಿ ಅಧ್ಯಯನ ಪೂರ್ಣಗೊಳಿಸಿದ ಪಕ್ಷದಲ್ಲಿ ಸ್ನಾತಕ ಆನರ್ಸ್  ಪದವಿ ನೀಡಲಾಗುವುದು.  ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾಗಿದ್ದಲ್ಲಿ ಅಂತಹ  ಸ್ನಾತಕ ಆನರ್ಸ್  ಪದವಿಧರರು  ನೇರವಾಗಿ PH.D ಪದವಿ ಅಧ್ಯಯನ ನಡೆಸಲು ಅರ್ಹರಾಗಿರುತ್ತಾರೆ.

ಒಂದು ವೇಳೆ ಅದೇ ವಿದ್ಯಾಲಯದಲ್ಲಿ ಸ್ನಾತಕ ಆನರ್ಸ್ ಪದವಿ ತರಗತಿ ಲಭ್ಯವಿಲ್ಲ ದಿದ್ದ ಪಕ್ಷದಲ್ಲಿ ಬೇರೊಂದು ಮಹಾವಿದ್ಯಾಲಯ ಸೇರಿ, ನಾಲ್ಕನೇ ವರ್ಷದ ಸ್ನಾತಕ ಆನರ್ಸ್ ಪೂರ್ಣಗೊಳಿಸಲು ಅವಕಾಶ ಒದಗಿಸಲಾಗಿದೆ.