ತೆಲುಗು ನಟ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ಪುಷ್ಪಾ ಸಿನಿಮಾ ಮತ್ತೆ ಮತ್ತೆ ಸದ್ದು ಮಾಡುತ್ತಲೇ ಇದೆ. ಕಳೆದ ವಾರವೆಲ್ಲ, ಓಟಿಟಿಯಲ್ಲಿ ಯಾರೂ ಊಹಿಸಿದಷ್ಟು ವೇಗವಾಗಿ ವ್ಯೂಗಳನ್ನು ಪಡೆದ ಈ ಚಿತ್ರ, ಕಲಕ್ಷನ್ ಮೂಲಕವೂ ಬಾಲಿವುಡ್ ನಿರ್ಮಾಪಕರಿಗೆ ತಲೆನೋವಾಗಿತ್ತು, ಈಗ ಪದೇ ಪದೇ ದೇಶ-ವಿದೇಶದ ನಾನಾ ಆಟಗಾರರು, ನಟರು ಚಿತ್ರದ ಹಾಡಿಗೆ ಕುಣಿದು ವೀಡಿಯೋ ಅಪ್ ಲೋಡ್ ಮಾಡುವ ಮೂಲಕ ಮತ್ತೆ ಚಿತ್ರವನ್ನು ಜೀವಂತವಾಗಿಡುತ್ತಿದ್ದಾರೆ. ಕಾಂಬೋಡಿಯಾದ ಕಲಾವಿದರೊಬ್ಬರು ಪುಷ್ಪಾ ಚಿತ್ರದ ಎರಡು ಹಾಡುಗಳನ್ನು ಟಿಕ್ ಟಾಕ್ ಮಾಡಿ ದೊಡ್ಡಸುದ್ದಿ ಮಾಡಿದ್ದು ಇನ್ನೂ ಮಾಸದ ನೆನಪು.

ಅಷ್ಟೊತ್ತಿಗಾಗಲೇ, ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿಗೆ ಕುಣಿದಿದ್ದರು. ಕೇವಲ ಅವರು ಮಾತ್ರ ಹಾಡಿಗೆ ಹೆಜ್ಜೆಹಾಕಿರಲಿಲ್ಲ. ಹಾರ್ದಿಕ್ ಪಾಂಡ್ಯರ ಜೊತೆಯಲ್ಲಿ ವಯಸ್ಸಾದ ಅಜ್ಜಿಯೂ ಅವರ ಅಜ್ಜಿಯನ್ನೂ ಬಳಸಿಕೊಂಡದ್ದು ವಿಶೇಷವಾಗಿತ್ತು. ಅದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿ- ನಮ್ಮ ಪುಷ್ಪನಾನಿ ಇವರು ಅಂತ ಬರೆದುಕೊಂಡಿದ್ದರು ಪಾಂಡ್ಯ.

ಹಾರ್ದಿಕ್ ಪಾಂಡ್ಯರ ಈ ಹಾಡಿಗೆ ಪುಷ್ಪಾ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಬಹಳ ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದೀರಿ. ನಿಮ್ಮ ಬಗ್ಗೆ ನನಗೆ ಹೃದಯ ತುಂಬಿದ ಪ್ರೀತಿ, ಗೌರವವಿದೆ’ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಹಾರ್ದಿಕ್ ಸಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಐಪಿಎಲ್ ನ ಅಹ್ಮದಾಬಾದ್ ತಂಡವು ಮುಂಬರುವ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯರನ್ನು ತಂಡದ ನಾಯಕನನ್ನಾಗಿ ಮಾಡುವುದಾಗಿ ಹೇಳಿಕೆ ನೀಡಿತ್ತು. ಹಾರ್ದಿಕ್ ಪಾಂಡ್ಯ ಐಪಿಎಲ್ ನಲ್ಲಿ ಆಯ್ಕೆಯಾದಾಗಿನಿಂದ ಮುಂಬಯಿ ಇಂಡಿಯನ್ ಪರ ಆಡುತ್ತಿದ್ದರು. ಕಳೆದ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿರಲಿಲ್ಲ.

ಮುಂಬೈ ಇಂಡಿಯನ್ಸ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿತ್ತು. ಇದನ್ನು ಷೇರ್ ಮಾಡಿರುವ ಹಾರ್ದಿಕ್ ಪಾಂಡ್ಯ ಹೀಗೆ ಬರೆದು ಕೊಂಡಿದ್ದರು- ನನ್ನ ಜೀವನ ಪೂರ್ತಿ ಈ ನೆನಪುಗಳನ್ನು ಹಾಗೇ ಇಟ್ಟುಕೊಳ್ಳುತ್ತೇನೆ. ನನ್ನ ಪ್ರತಿ ಕ್ಷಣವೂ ಈ ನೆನಪುಗಳೊಂದಿಗೆ ಬದುಕುತ್ತೇನೆ. ಅಭಿಮಾನಗಳೊಂದಿಗೆ ಗಟ್ಟಿಯಾದ ಗೆಳೆತನ ಬಂಧವನ್ನು ಹಾಕಿಕೊಟ್ಟಿದೆ. ನಾನು ಕೇವಲ ಆಟಗಾರನಾಗಿ ಬೆಳೆದಿಲ್ಲ, ಒಬ್ಬ ವ್ಯಕ್ತಿಯಾಗಿಯೂ ಬೆಳೆದಿದ್ದೇನೆ. ನಾನು ಯಾವಾಗಲು ನಿಮಗೆ ಋಣಿ ಅಂತ ಮುಂಬೈ ಇಂಡಿಯನ್ಸ್ ಗೆ ಕೃತಜ್ಞತೆ ಹೇಳಿದ್ದಾರೆ.

(Actor Allu Arjun replied to Cricketer Hardik Pandya video about Pushpa Film )