ಮುಂಬಯಿ: ಸ್ಟಾರ್ ನಟರಾಗುವುದು ಕಷ್ಟ. ಸ್ಟಾರ್ ನಟರಾದ ಮೇಲೆ ಆ ಪಟ್ಟ ಉಳಿಸಿಕೊಳ್ಳುವುದು ಇನ್ನೊಂದು ಕಷ್ಟ. ಇದಾದ ಮೇಲೆ, ಸ್ಟಾರ್ ನಟರು ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸೋದು ಇದೆಯಲ್ಲ ಇದು ಎಲ್ಲದಕ್ಕಿಂತ ಕಡುಕಷ್ಟ. ಮಕ್ಕಳು ಹಾದಿ ತಪ್ಪಿದರಂತೂ ಊರ ಬಾಯಿಗೆ ಆಹಾರ ಗ್ಯಾರಂಟಿ. ಶಾರುಖ್ ಖಾನ್ ಪರಿಸ್ಥಿತಿ ಹೀಗೆ ಆಗಿತ್ತು.

ಮಗ ಆರ್ಯಾನ್ ಖಾನ್ ಡ್ರಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಮೇಲೆ ಶಾರುಖ್ ಒದ್ದಾಡಿ ಹೋದರು. ಇಡೀ ಜಗತ್ತು, ಶಾರುಖ್ ಮಗ ಸರಿಯಾದ ಹಾದಿಯಲ್ಲಿ ಇಲ್ಲ. ಅವನು ಯಾವಾಗಲೋ ಹಾದಿ ತಪ್ಪಿದ್ದಾನೆ ಅಂತೆಲ್ಲ ಮಾತನಾಡಿಕೊಂಡಿತು. ಶಾರುಖ್ ಕುಗ್ಗಿಹೋದರು. ಈಗ ನಿಜವಾಗಲೂ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಏನು ಮಾಡ್ತಾ ಇದ್ದಾರೆ ಗೊತ್ತಾ?
ಆರ್ಯಾನ್ ಖಾನ್ ಗೆ ಸಿನಿಮಾದಲ್ಲಿ ನಟಿಸೋದಕ್ಕೆ ಅಂಥ ಆಸಕ್ತಿ ಇಲ್ಲ. ಹೀಗಾಗಿ, ಅವನು ಯಾವತ್ತೋ ಹೀರೋ ಆಗಬಹುದಿತ್ತು. ಆಗಲಿಲ್ಲ. ನಟನೆ ವಿಚಾರದಲ್ಲಿ ಅಪ್ಪನಥರ ಅಲ್ಲ ಇವನು. ಬದಲಿಗೆ, ನಿರ್ದೇಶನ, ಸ್ಕ್ಪ್ರಿಪ್ಟ್ ಅದು, ಇದೂ ಅಂತ ತಲೆಕೆಡಿಸಿಕೊಳ್ಳುತ್ತಿದ್ದಾನಂತೆ. ನಿಜ, ಈತ ಹೀರೋ ಆಗದೇ ಇದ್ದರು, ಹೀರೋಗಳನ್ನು ತಯಾರು ಮಾಡುವ ನಿರ್ದೇಶಕನಾಗುವ ಹಂಬಲ ಇರುವುದರಿಂದ ಶಾರುಖ್ ನಿಟ್ಟುಸಿರು ಬಿಟ್ಟಿದ್ದಾರಂತೆ. ಒಟ್ಟಾರೆ, ಆರ್ಯನ್ ಸಿನಿಮಾರಂಗದಲ್ಲೇ ನೆಲಯೂರಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾನೆ.

ಒಂದು ಮೂಲದ ಪ್ರಕಾರ ಆರ್ಯನ್, ಅಮೇಜಾನ್ ಪ್ರೈಮ್ ಮತ್ತು ಫೀಚರ್ ಫಿಲ್ಮ್ ಅವರ ರೆಡ್ಡಿ ಚಿಲ್ಲಿ ಎಂಟರ್ ಟೈನ್ ಮೆಂಟ್ ಕಂಪೆನಿಗೆ ಈಗಾಗಲೇ ಕೆಲಸ ಮಾಡುತ್ತಿದ್ದಾನೆ. ವೆಬ್ ಸೀರಿಸ್ ಗೆ ಬೇಕಾದ ಹೊಸ ಕತೆಗಳನ್ನು ಹೆಣೆಯುವ ಇವನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.ಅವರು ರೈಟರ್ಸ್ ರೂಮಿನ ಬೆನ್ನೆಲುಬಾಗಿದ್ದಾರಂತೆ. ಅಲ್ಲಿ ಬಿಲಾಲ್ ಸಿದ್ದಿಕಿ ಅವರಿಗೆ ಸಹಾಯಕರಾಗಿದ್ದಾರೆ. ಇನ್ನೊಂದು ಕಡೆ ಶಾರುಖ್ ಮಗಳು ಸುಹಾನಾ ಚಿತ್ರರಂಗಕ್ಕೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬರತೊಡಗಿದ್ದಾಳೆ. ಜೋಯಾ ಅಖ್ತರ್ ನೆಟ್ ಫ್ಲಿಕ್ಸ್ ಗೆ ತಯಾರು ಮಾಡುತ್ತಿರುವ ವೆಬ್ ಸೀರೀಸ್ ನಲ್ಲಿ ಸುಹಾನಾ ನಟಿಸುತ್ತಿದ್ದಾಳೆ.

ಶಾರುಖ್ ಖಾನ್ ಅವರ ಇಬ್ಬರು ಮಕ್ಕಳು ಕೂಡ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಶಾರುಖ್ ಖಾನ್ ಅವರು ಅಥ್ಲೀಯ ಸಿನಿಮಾದ ಎರಡು ದಿನಗಳ ಶೂಟಿಂಗ್ ಮುಂಬಯ್ ನಲ್ಲಿ ನಡೆಯಲಿದೆ. ರಾಜ್ ಕುಮಾರ್ ಹಿರಾನಿ ಅವರ ಸಿನಿಮಾ ಸೆಟ್ಟೇರಲಿದೆ, ಶಾರುಖ್ ಪಠಾಣ್ ಪ್ರಸ್ತುತ ಸ್ಪೈನ್ ನಲ್ಲಿ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:ಶಾರುಖ್‌ ಖಾನ್ ಬಿಜೆಪಿ ಸೇರಿದರೆ ಸಕ್ಕರೆ ಪುಡಿಯಾಗುತ್ತದೆ ಡ್ರಗ್ಸ್ ಎಂದ ಎನ್‌ಸಿಪಿ ನಾಯಕ ಛಗನ್‌ ಭುಜಬಲ್

ಇದನ್ನೂ ಓದಿ:ಪ್ರಕಾಶ್ ಪಡುಕೋಣೆ ಬಯೋಗ್ರಫಿ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ

(Actor Shahrukhkhan Son and daughter are putting steps into bollywood)