ಈ ಪ್ರೀತೀ, ಗೆಳೆತನ ಅನ್ನೋದು ಒಂದೇ ದೇಹದ ಎರಡು ಹೆಗಲಿದ್ದಂತೆ. ಅವಕ್ಕೆ ಯಾವ ಜಾತೀ, ಧರ್ಮ ಅನ್ನೋದು ಇಲ್ಲ; ಅದೇ ಒಂದು ಧರ್ಮ.ಈ ಜಗತ್ತಲ್ಲಿ ನಿಷ್ಕಲ್ಮಷವಾದ ಸ್ನೇಹಕ್ಕೆ ಅಂತಸ್ತಿಲ್ಲ. ಹೀಗಾದಾಗಲೇ ಗೆಳೆತನ ಎಲ್ಲಿಗೆ ಬೇಕಾದರು, ಹೇಗೆ ಬೇಕಾದರು ಹರಿದಾಡುವುದು.

ಅದರಲ್ಲೂ ಪುಟ್ಟಮಕ್ಕಳಲ್ಲಿ ಕಾಣುವ ಗೆಳೆತನ, ಪ್ರೀತಿ ಹಂಡ್ರೆಡ್ ಪರ್ಸೆಂಟ್ ಪ್ಯೂರ್: ಅಪ್ಪಟ ಬಂಗಾರ ಅಂತರಲ್ಲ ಅದೇ. ಯಾವುದೇ ಕಲಬೆರೆಕೆಯಲ್ಲ.
ಈ ವೀಡಿಯೋದ ಹುಡುಗನ ನೋಡಿ. ಅವನನ್ನು ಕಾರು ಒರೆಸುವಂತೆ ಮಾಡಿದ ಬಡತನ, ಕಾರೊಳಗೆ ಕೂತ ಹುಡುಗನ ಶ್ರೀಮಂತನ ಇಬ್ಬರಿಗೂ ಗೊತ್ತಾಗಲೇ ಇಲ್ಲ. ಅವನು ಆಟದ ವಸ್ತುಕೊಟ್ಟ, ಅದಕ್ಕೆ ಪ್ರತಿಯಾಗಿ ಇವನು ಚಿಪ್ಸ್ ತಂದು ಕೊಟ್ಟ. ಇಬ್ಬರೂ ಒಂದೇ ಪ್ಯಾಕೆಟ್ ನಲ್ಲಿ ಕೈ ಹಾಕ್ಕೊಂಡು ತಿಂದ್ರಲ್ಲ. ಅದಕೆ ಅವರೊಳಗಿರುವ ಮುಗ್ದ, ಪ್ಯೂರ್ ಪ್ರೀತಿಯೇ ಕಾರಣ.

ಕಾರು ಹೋದನಂತರವೂ ಅದರ ಬೆನ್ನಿಗೆ ಟಾಟಾ ಮಾಡುವ ಹುಡುಗನ ಈ ಪ್ರೀತಿಗೆ ಎಕ್ಸಪರಿ ಇಲ್ಲ. ಜಾತಿ, ಧರ್ಮ, ಅಂತಸ್ತು, ಈರ್ಷೇಗಳ ಸೋಂಕು ತಗುಲದ ಹೃದಯಗಳು ಹೇಗಿರ್ತವೆ ಅಂದರೆ, ಹೀಗೆ.  ಈ ಹುಡುಗರು ಬಾಲ್ಯದಿಂದಲೇ ಒಂದಾಗಿ ಬೆಳೆದು, ಗೆಳೆತನದ ಹಸ್ತ ಇಬ್ಬರ ಹೆಗಲ ಮೇಲೆ ಹರಡಿಕೊಂಡರೆ, ಭವಿಷ್ಯದಲ್ಲಿ ಇವರ ಬದುಕು ಹೇಗಿರಬಹುದು ಯೋಚಿಸಿ? ಪುನೀತ್ ಅವರ ಎರಡು ನಕ್ಷತ್ರ ಸಿನಿಮಾ ನೆನಪಿಗೆಬರುತ್ತದೆ ಅಲ್ವೇ.
ಇಂದಿನ ಜಗತ್ತಿಗೆ ಇಂಥ ನಿಷ್ಕಲ್ಮಷ ಪ್ರೀತಿ, ಗೆಳೆತನದ ಅವಶ್ಯಕತೆ ತುಂಬಾ ಇದೆ.

(Children’s friendship is very pure )