ಚಿಕ್ಕಮಗಳೂರು: ಪೋಲಿಸರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿಇಂದು ಸಂಜೆ ದಿಢೀರ್ ಕೆಲಸ ನಿಲ್ಲಿಸಿದ ಚಿಕ್ಕಮಗಳೂರು ನಗರದ ೬ ಠಾಣೆ ಪೊಲೀಸರು ನಗರ ಠಾಣೆ ಎದುರು ಜಮಾಯಿಸಿ ಪೋಲಿಸ್ ವರಿಷ್ಟಾಧಿಕಾರಿಗಳ ಎದುರು ಪ್ರತಿಭಟಿಸಿದ ಘಟನೆ ನಡೆಯಿತು.

ಇತ್ತಿಚೆಗೆ ನಗರಠಾಣೆಯಲ್ಲಿ ವಕೀಲನನ್ನು ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ಆರು ಜನ ಪೊಲೀಸರ ಅಮಾನತುಗೊಳಿಸಿರುವುದನ್ನು ಕೈಬಿಡಬೇಕು, ಪೋಲಿಸರನ್ನು ಬಂಧಿಸಬಾರದು, ಪೋಲೀಸರ ಮೇಲೆ ಹಲ್ಲೆ ನಡೆಸಿ ವಕೀಲg ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವವರೆಗೂ ಕತವ್ಯಕ್ಕೆ ತೆರಳುವುದಿಲ್ಲಾ ಎಂದು ಪಟ್ಟುಹಿಡಿದು ಕುಳಿತರು.

ಕೆಲಸ ಬಿಟ್ಟು ಬಂದ ೨೦೦ಕ್ಕೂ ಹೆಚ್ಚು ಪೊಲೀಸರು ಕುಟುಂಬಗಳ ಜೊತೆ ಠಾಣೆ ಮುಂದೆ ಜಮಾವಣೆ ಕೊಂಡಿದ್ದಾರೆ. ಪೊಲೀಸರ ಅಮಾನತು, ನ್ಯಾಯಾಲಯಕ್ಕೆ ಹಾಜರು ಪಡಿಸುವ ಹಿನ್ನೆಲೆ ಕೆಲಸಕ್ಕೆ ಗೈರುಹಾಜರಾಗಿ ರಕ್ಷಣೆ ಇಲ್ಲದ ಕಡೆ ಕೆಲಸ ಮಾಡುವುದು ಕಷ್ಟ. ಠಾಣೆಗೆ ನುಗ್ಗಿ ಪೋಲಿಸರ ಮೇಲೆ ಹಲ್ಲೆ ನಡೆಸಿದ ವಕೀಲರಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು. ಎಂದು ಅಳಲು ತೋಡಿಕೊಂಡಿದ್ದಾರೆ.

ನ್ಯಾಯ ಕೇಳಿ ಠಾಣೆಗೆ ಪಾನಮತ್ತರಾಗಿ ಆಗಮಿಸಿದ್ದ ಕೆಲ ವಕೀಲರು, ಠಾಣೆಗೆ ಅತಿಕ್ರಮ ಪ್ರವೇಶ ಶಸ್ತ್ರಾಗಾರಕ್ಕೂ ನುಗ್ಗಿದ್ದರೂ ಅವರನ್ನು ತಡೆಯಲು ಹೋದ ಸಂದರ್ಭದಲ್ಲಿ ಹಲ್ಲೆ ಮಾಡಿದ್ದೆ ಅಲ್ಲದೆ, ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ, ಮೊಬೈಲ್ ಒಡೆದುಹಾಕಿದ್ದಾರೆಎಂದು ಪೊಲೀಸರು ದೂರಿದ್ದಾರೆ.

ತನಿಖೆ ಏಕಮುಖವಾಗಿ ಸಾಗುತ್ತಿದ್ದು, ಠಾಣಾಧಿಕಾರಿಗೆ ಮೊದಲು ಕಪಾಳಮೋಕ್ಷ ಮಾಡಿದ ವಕೀಲ ಸೇರಿದಂತೆ ಠಾಣೆಯಲ್ಲಿ ಅಸಭ್ಯ/ ಎಲ್ಲೇ ಮೀರಿ ವರ್ತಿಸಿದ ಎಲ್ಲಾ ವಕೀಲರ ವಿರುದ್ಧವು ಪ್ರಕರಣ ದಾಖಲಿಸಿ ಬಂಧಿಸುವಂತೆ ಪೊಲೀಸರು ಪಟ್ಟು ಹಿಡಿದಿದ್ದಾರೆ.

ಪೋಲೀಸ್ ವರಿಷ್ಟಾಧಿಕಾರಿಗಳ ಎದುರೆ ಟೇಬಲ್ ಕುಟ್ಟಿ ದುಂಡಾವರ್ತನೆ ತೋರಿದ ವಕೀಲ ಎಫ್ ಐಆರ್ ಪ್ರತಿಯನ್ನು ಹರಿದು ಹಾಕಿದ್ದಾರೆ ಅವರ ವಿರುದ್ದ ಕ್ರಮ ಯಾಕಿಲ್ಲಾ ಎಂದು ಪ್ರಶ್ನಿಸಿದರು. ಕಾನೂನಿನ ಅರಿವಿರುವ ವಕೀಲರೇ ಅನುಚಿತವಾಗಿ ವರ್ತಿಸಿದ್ದರೂ ಮೌನವಹಿದರೆ ಪೋಲಿಸರಿಗೆ ನೈತಿಕ ಬೆಂಬಲ ನೀಡುವವರು ಯಾರು ಎಂಬೆಲ್ಲಾ ಪ್ರಶ್ನೆಗಳು ತೂರಿಬಂದವು.

ವಾಟ್ಸಾಪ್ ಗ್ರೂಪ್ ಮೂಲಕ ಜಿಲ್ಲೆಯ ೮೦೦ ಪೊಲೀಸರು ಒಂದಾಗಿದ್ದು ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಪೋಲಿಸರ ಆಕ್ರೋಷದ ಮಾತುಗಳ ನಡುವೇ ಪೋಲಿಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರಾದರೂ ಪೋಲಿಸರು ಜಗ್ಗದೆ ಕುಳಿತಿದ್ದರೂ. ಪ್ರತಿಭಟನೆ ಅಹೋರಾತ್ರಿ ಮುಂದುವರೆಯುವ ಲಕ್ಷಣಗಳು ಗೋಚರಿಸಿತು.

ವಕೀಲರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿದ ಘಟನೆ ಖಂಡಿಸಿ ಕುಟುಂಬಸ್ಥರು ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Dheedir protest of the police against the suspension of the police