ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿರುವಂತ ನಗರದ ಚಾಮರಾಜಪೇಟೆಯಲ್ಲಿರುವಂತ ಈದ್ಗಾ ಮೈದಾನದಲ್ಲಿಯೇ, ರಾಜ್ಯ ಸರ್ಕಾರದಿಂದ ಧ್ವಜಾರೋಹಣವನ್ನು ( Flag Hoisting ) ಆಗಸ್ಟ್ 15ರಂದು ನೆರವೇರಿಸಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಇಂದು ಪೊಲೀಸರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಸ್ವತ್ತು ಅಂತ ತೀರ್ಪು ಬಂದಿದೆ. ಹೀಗಾಗಿ ನಮ್ಮ ಇಲಾಖೆಯ ಸುಪರ್ಧಿಯಲ್ಲೇ ಆಗಸ್ಟ್ 15ರಂದು ಧ್ವಜಾರೋಹಣ ಮಾಡಲಾಗುತ್ತದೆ ಎಂದರು.

ಆಗಸ್ಟ್ 15ರಂದು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಹಾಯ ಆಯುಕ್ತರಿಂದ ಧ್ವಜಾರೋಹಣ ನೆರವೇರಲಿದೆ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು, ಸಂಸದರು ಬರಬಹುದು. ಧ್ವಜಾರೋಹಣದ ವೇಳೆಯಲ್ಲಿ ಭಾರತ ಮಾತಕಿ ಜೈ ಹಾಗೂ ವಂದೇ ಮಾತರಂ ಘೋಷಣೆ ಮಾತ್ರವೇ ಕೂಗಲು ಅವಕಾಶ ನೀಡಲಾಗಿದೆ. ಬೇರೆ ಯಾವುದೇ ಘೋಷಣೆಗೆ ಅವಕಾಶವಿಲ್ಲ. ನಿಯಮ ಮೀರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಧ್ವಾಜೋರಹಣ ಮಾಡೋದನ್ನು ಎಲ್ಲರೂ ಸ್ವಾಗತಿಸುತ್ತಾರೆ ಎನ್ನುವ ಭರವಸೆ ಇದೆ. ಯಾರಿಗಾದ್ರೂ ಆಕ್ಷೇಪವಿದ್ದರೇ ಇಲಾಖೆಗೆ ದೂರು ನೀಡಬಹುದು. ಯಾವೋದು ಕೋರ್ಟ್ ಈದ್ಗಾ ಮೈದಾನದ ಹಕ್ಕು ಪಾಲಿಕೆ ಅಥವಾ ವಕ್ಫ್ ಬೋರ್ಡ್ ಗೆ ಕೊಟ್ಟಿಲ್ಲ. ಅದು ಕಂದಾಯ ಇಲಾಖೆಗೆ ಸೇರಿದ್ದು ಅಂತ ನೀಡಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.