ಭಾರೀ ಪ್ರಮಾಣದ ಧೂಳಿನಿಂದಾಗಿ ಕಾರು ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿರುವ ಘಟನೆ ಅಮೆರಿಕಾದ ದಕ್ಷಿಣ ಮೊಂಟಾನಾದಲ್ಲಿ ನಡೆದಿದೆ. ಘಟನೆಯಲ್ಲಿ  ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಲವಾದ ಗಾಳಿ ಹಾಗೂ ರಸ್ತೆ ತುಂಬ ತುಂಬಿಕೊಂಡಿದ್ದ ಧೂಳಿನಿಂದಾಗಿ ಸರಣಿ ಅಪಘಾತ ನಡೆದಿದೆ. ಆರು ಟ್ರಕ್‌ಗಳು, ಸಾರ್ಜೆಂಟ್ ಸೇರಿದಂತೆ 21 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಇದುವರೆಗೂ ಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಹಾಗೆಯೇ ಮೃತರ ಹೆಸರು ಮತ್ತು ವಯಸ್ಸನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ ಎಂದು ಮೊಂಟಾನಾ ಹೈವೇ ಪೆಟ್ರೋಲ್ ವಕ್ತಾರ ಜೇ ನೆಲ್ಸನ್ ಹೇಳಿದ್ದಾರೆ.

ಅಪಘಾತದ ಸಮಯದಲ್ಲಿ 96 mph ಗಾಳಿಯ ವೇಗ ವರದಿಯಾಗಿದೆ ಎಂದು ಬಿಲ್ಲಿಂಗ್ಸ್‌ನಲ್ಲಿರುವ ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ನಿಕ್ ವರ್ಟ್ಜ್ ಹೇಳಿದರು. ಶುಕ್ರವಾರ ಸಂಜೆ 4:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ವಾಹನಗಳು ಡಿಕ್ಕಿ ಹೊಡೆದು ಚೆಲ್ಲಾಪಿಲ್ಲಿಯಾಗಿ ರಸ್ತೆಯಾದ್ಯಂತ ನಿಂತಿವೆ. ಅಪಘಾತದಿಂದ ಆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಲಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಅಪಘಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಗವರ್ನರ್ ಗ್ರೆಗ್ ಜಿಯಾನ್ಫೋರ್ಟೆ ಸಾವನ್ನಪ್ಪಿದವರಿಗೆ ತೀವ್ರ ಸಂತಾಪ ಸೂಚಿಸಿದರು, ಕುಟುಂಬಸ್ಥರಿಗೆ ದುಃಖ ಭರಸಿಉವ ಶಕ್ತಿ ನೀಡಲಿ ಎಂದು ಟ್ವೀಟ್‌ ಮೂಲಕ ಕೋರಿದ್ದಾರೆ.