ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪ ಗರಿಷ್ಠ ಮಟ್ಟಕ್ಕೂ ಏರತೊಡಗಿದೆ. ಇದರೊಂದಿಗೆ ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್ ಕೂಡ ಹೊರ ಬಿದ್ದಿದ್ದು, ಹೆಚ್ಚು ಮಳೆಯಕಾರಣ, ಚಳಿಗಾಲದ ಅವಧಿ ಇಳಿಮುಖವಾದ ಕಾರಣ, ಈ ಬಾರಿ ಬೇಸಿಗೆ ಬೇಗ ಶುರುವಾಗಿದ್ದು, ನಾಲ್ಕು ತಿಂಗಳು ಬೇಸಿಗೆಯ ಬಿಸಿಲು, ರಾಜ್ಯದ ಜನತೆಯನ್ನು ತಟ್ಟಲಿದೆ.

ಹೌದು.. ಕಳೆದ ನವೆಂಬರ್ ನಲ್ಲಿ ಹೆಚ್ಚು ಮಳೆಯಾದ ಕಾರಣ, ಚಳಿಗಾಲದ ಅವಧಿ ಇಳಿಮುಖವಾಗಿದೆ. ಈ ಕಾರಣದಿಂದಾಗಿ ವಾಡಿಕೆಗಿಂತ ಮೊದಲೇ ಬೇಸಿಗೆ ಆರಂಭಗೊಂಡಿದ್ದು, ಮೂರು ತಿಂಗಳ ಬೇಸಿಗೆ ಕಾಲ, ಈ ವರ್ಷ ನಾಲ್ಕು ತಿಂಗಳು ಇರಲಿದೆ.
ಅಂದಹಾಗೇ ಪ್ರತಿ ವರ್ಷ ಮಾರ್ಚ್ 1ರಿಂದ ಆರಂಭವಾಗುವ ಬೇಸಿಗೆ, ಮೇ 31ರವರೆಗೆ ಇರುತ್ತಿತ್ತು. ಆದ್ರೇ ಈ ವರ್ಷ ಫೆಬ್ರವರಿ 2ನೇ ವಾರವೇ ಬೇಸಿಗೆ ಆರಂಭವಾಗಿದೆ.

ಅಲ್ಲದೇ ವಾಡಿಕೆಯಂತೆ ಏಪ್ರಿಲ್ 2ನೇ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದಂತ ಉಷ್ಣಾಂಶ ಹೆಚ್ಚಳವಾಗುತ್ತಿತ್ತು. ಆದ್ರೇ ಈ ವರ್ಷ ಮಾರ್ಚ್ 3ನೇ ವಾರದಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಈ ತಿಂಗಳ ಮೂರನೇ ವಾರ ಅಥವಾ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ಸ್ ತಲುಪುವ ಸಾಧ್ಯತೆ ಇದೆ.

Summer is high