ಚಿಕ್ಕಮಗಳೂರು : ಗೆದ್ದಿರುವ ಅಭ್ಯರ್ಥಿಗಳ ವಿಜಯ ಪತಾಕೆ ಸಹಿಸಲಾಗದೆ ಆರ್.ಎಸ್.ಎಸ್ ಮತ್ತು ಬಿಜೆಪಿ ಗೆಲುವು ಎಂದು ಹೇಳುವ ಮೂಲಕ ಸೋಲಿನ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಶಿವಾನಂದ ಸ್ವಾಮಿಯವರ ಹೇಳಿಕೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನನಗೆ ಎಲ್ಲಾ ಪಕ್ಷದವರ ಸಾಹಿತಿಗಳ ಚಿಂತಕರ ಬೆಂಬಲ ನೀಡಿದ್ದರಿಂದಲೇ ನನಗೆ ಗೆಲುವಾಗಿದೆ. ಇದು ನನ್ನ ಗೆಲುವಲ್ಲ, ನನ್ನ ಜಿಲ್ಲೆಯ ಸಾಂಸ್ಕೃತಿಕ ವಲಯದ ಕನ್ನಡದ ಗೆಲುವು ಎಂದು ಭಾವಿಸಿದ್ದೇನೆ. ಆದರೆ ಗೆದ್ದಿರುವ ಅಭ್ಯರ್ಥಿಗಳ ವಿಜಯ ಪತಾಕೆ ಸಹಿಸಲಾಗದೆ ಆರ್ ಎಸ್ ಎಸ್ ಮತ್ತು ಬಿಜೆಪಿ ಗೆಲವು ಎಂದು ಹೇಳುವ ಮೂಲಕ ಶಿವಾನಂದಸ್ವಾಮಿಯವರು ಸೋಲಿನ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಶಿವಾನಂದಸ್ವಾಮಿಯವರು ತಿಳಿಸಿದಂತೆ ಅವರ ಬೆಂಬಲಿತ ಕ್ರಾಂಗ್ರೆಸ್ ನವರು ಪಕ್ಷ ಮಟ್ಟದಲ್ಲಿ ಸಭೆ ನಡೆಸಿದ್ದು ಬಯಲು ಸೀಮೆಯಲ್ಲಿ ಬಿಜೆಪಿ ಪಕ್ಷವನ್ನು ಒತ್ತಾಯ ಪೂರ್ವಕವಾಗಿ ಅವರ ಪರ ಕೆಲಸ ಮಾಡುವಂತೆ ಸೂಚನೆ ನೀಡಿ ಅವರಿಗೆ ಬೆಂಗಾವಲಾಗಿ ನಿಂತಿದ್ದು ಗುಟ್ಟಾಗಿ ಉಳಿದಿಲ್ಲ. ಆದರೆ ನಾನು ಪಕ್ಷಾತೀತವಾಗಿ ಮತಯಾಚಿಸಿದ್ದೇನೆ. ಎಲ್ಲಾ ಪಕ್ಷದ ಕಛೇರಿಯಲ್ಲಿನ ಕಸಾಪ ಮತದಾರರನ್ನು ಭೇಟಿಮಾಡಿ ಮತಯಾಚಿಸಿದ್ದೇನೆ ಇದು ತಪ್ಪಾ? ಎಂದು ಪ್ರಶ್ನಿಸಿದರು.

ಸಾಹಿತ್ಯ ಪರಿಷತ್ತು ಪಾವಿತ್ರ‍್ಯ ಉಳಿಸಿಕೊಂಡಿರುವ ಕ್ಷೇತ್ರ ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯ ಆದರೆ ಒಂದು ಪಕ್ಷದ ವಕ್ತಾರರಾಗಿ ಪರಿಷತ್ತಿನ ಪ್ರತಿನಿಧಿಯಾಗುವುದು ಎಷ್ಟು ಸರಿ ಎಂಬುದಕ್ಕೆ ಈ ಗೆಲುವೇ ಉತ್ತರ ಎಂದು ಭಾವಿಸಿದ್ದೇನೆ. ಶಿವಾನಂದಸ್ವಾಮಿ ಅವರು ಒಂದು ಪಕ್ಷದ ಪ್ರಮುಖ ಕಾರ್ಯಕರ್ತರಾದ್ದರಿಂದಲೇ ಕಾಂಗ್ರೆಸ್ ಒಳಗೊಂಡAತೆ ಎಲ್ಲಾ ಪಕ್ಷದ ಕಸಾಪ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಸಾತ್ವಿಕ ಮನಸ್ಸುಗಳು ನನ್ನ ಜಿಲ್ಲೆಯ ಎಲ್ಲಾ ಪಕ್ಷದವರು, ಪಂಥದವರು ನನ್ನ ಕೈ ಹಿಡಿದಿದ್ದಾರೆ. ಅವರೆಲ್ಲ ಪ್ರೀತಿಯ ಹಾರೈಕೆಯಿಂದಲೇ ನನ್ನ ಗೆಲುವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:

Ka.sa.pa : ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆದ್ದ ಆರ್.ಎಸ್.ಎಸ್. ಶಿವಾನಂದ ಸ್ವಾಮಿ ಲೇವಡಿ