ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಪತ್ತೆಗೆ ವಿಶೇಷ ಗಮನ ಹರಿಸಿರುವ ಪೊಲೀಸ್ ಇಲಾಖೆ ಜಿಲ್ಲೆಯ  ವಿವಿಧ ೪೬ ಸ್ಥಳಗಳಲ್ಲಿ ೨೬೩ ಅತ್ಯಾಧುನಿಕ ಕ್ಯಾಮೆರಾಗಳನ್ನು  ಅಳವಡಿಸಿದೆ.  ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ೪೦ ಹಾಗೂ ಕಡೂರಿನಲ್ಲಿ ಸಾರ್ವಜನಿಕ ಸಹಕಾರದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾಹಿತಿ ನೀಡಿದ್ದಾರೆ.

ಅಳವಡಿಸಿರುವ ಕ್ಯಾಮೆರಾಗಳಲ್ಲಿ ೪೦ ಕ್ಯಾಮೆರಾ ವಿಶೇಷ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದ್ದು, ವಾಹನ ಸಂಖ್ಯೆ ದಾಖಲೆ, ಮುಖಚಹರೆ ಪತ್ತೆ ಇನ್ನಿತರ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಕಲೆ ಹಾಕಲಿದೆ ಎಂದಿದ್ದಾರೆ.

ಕಡೂರಿನ ಬಳ್ಳೇಕೆರೆಯ ಆಂಜನೇಯ ಸ್ವಾಮಿ ದೇವಾಲಯ, ಯಗಟಿ, ಸಿಂಗಟಗೆರೆ, ಪಂಚನಹಳ್ಳಿ ದೇವಾಲಯಗಳಲ್ಲಿಯೂ ಅತ್ಯಾಧುನಿಕ, ಅಲರಾಮ್, ವ್ಯವಸ್ಥೆಯನ್ನು ಅಳವಡಿಸಿದ್ದು, ಬಾಗಿಲನ್ನು ಸ್ಪರ್ಶ ಮಾಡಿದ ತಕ್ಷಣ ಅಲರಾಂ ಸದ್ದು ಮೊಳಗುತ್ತದೆ. ಆಡಳಿತ ಮಂಡಳಿಯ ೧೦ ಜನರಿಗೆ ತಕ್ಷಣ ಧ್ವನಿ ಸಂದೇಶ ಹೋಗುತ್ತದೆ. ಇದರಿಂದ ತಕ್ಷಣ ಕಾರ್ಯಪ್ರವೃತ್ತರಾಗಿ ಕಳ್ಳತನ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಕ್ಯಾಮೆರಾ ಅಳವಡಿಕೆ ಸಂಬಂಧ ಚಿಕ್ಕಮಗಳೂರು, ಮೂಡಿಗೆರೆ, ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪೊಲೀಸ್ ಇಲಾಖೆ ವರ್ತಕರು, ದೇವಾಲಯದ ಆಡಳಿತ ಮಂಡಳಿ, ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

ATM Machine: ಎ.ಟಿ.ಎಂ ಯಂತ್ರ – ಕಳ್ಳತನಕ್ಕೆ ವಿಫಲ ಯತ್ನ