ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಇಂದು ಮಧ್ಯಾಹ್ನ ಸುರಿದ ಗುಡುಗು, ಸಿಡಿಲು ಸಹಿತ ಮಳೆ ತಂಪೆರೆದಿದೆ.

೪೦ ಡಿಗ್ರಿ ದಾಖಲೆ ತಾಪಮಾನದಿಂದ ಆಗಸದೆಡೆಗೆ ಮುಖ ಮಾಡಿ ಎದುರು ನೋಡುತ್ತಿದ್ದ ಜನರಿಗೆ ಇಂದು ಮಧ್ಯಾಹ್ನ ಗುಡುಗು, ಸಿಡಿಲು, ಆಲಿಕಲ್ಲಿನೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ವರುಣ ಆರ್ಭರಿಸಿ ಬೊಬ್ಬಿರಿದಿದ್ದಾನೆ.

ಹವಾಮಾನ ಇಲಾಖೆ ಇನ್ನೂ ೩ ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಬೀಳುವ ಮುನ್ಸೂಚನೆ ನೀಡಿದೆ ಅದರಂತೆ ಜಿಲ್ಲೆಯ ಗ್ರಾಮೀಣ ಪ್ರದೇಶವೂ ಸೇರಿದಂತೆ ಮಳೆ ಸುರಿದು ವಾತಾವರಣವನ್ನು ತಣ್ಣಾಗಿಸಿದೆ.

ಅಚಾನಕ್ಕಾಗಿ ಬಿದ್ದ ಭಾರೀ ಮಳೆಯಿಂದ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚರಂಡಿಗಳಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ವಾಹನ ಸಂಚಾರರು ಕೆಲ ಕಾಲ ಪರದಾಡಬೇಕಾಯಿತು.

ಅಂಬರ್‌ವ್ಯಾಲಿ ಶಾಲೆಯ ಹತ್ತಿರ ಮರ ಉರುಳಿಬಿದ್ದು ಕೆಲ ಕಾಲ ಸಂಚಾರ ಬಂದ್ ಆದ ಘಟನೆಯು ನಡೆಯಿತು.ಹೌಸಿಂಗ್‌ಬೋರ್ಡ್ ಹತ್ತಿರದ ಸುಮುಖನಗರದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ನಗರದ ಎಂ.ಜಿ ರಸ್ತೆಯ ೨ನೇ ತಿರುವಿನಲ್ಲಿ ಅಗಸರ ಬೀದಿ ಸೇರಿದಂತೆ ವಿವಿಧೆಡೆ ನೀರು ತುಂಬಿ ದ್ವಿಚಕ್ರ ವಾಹನಗಳ ಜಲಾವೃತಗೊಂಡವು.

ಇಂದು ಸುರಿದ ಭಾರಿ ಆಲಿಕಲ್ಲು ಮಳೆಗೆ ಹಿರೇಮಗಳೂರಿನ ಅನೇಕರ ಮನೆಗಳ ಮೇಲಿರುವ ಬಿಸಿ ನೀರಿನ ಸೋಲಾರ್ ಟ್ಯೂಬ್ ಗಳು ಹಾನಿಗೊಂಡಿವೆ.

ನಗರದ ವಿವಿಧೆಡೆಯ ಮನೆಗಳ ಮೇಲ್ಚಾವಣಿಗಳಲ್ಲಿ ಅಳವಡಿಸಿದ್ದ ಸೋಲಾರ್ ಗಳ ಟ್ಯೂಭ್‌ಗಳ ಮೇಲೆ ದೊಡ್ಡಗಾತ್ರದ ಆಲಿಕಲ್ಲು ಮಳೆಯಿಂದ ಬಿಸಿ ನೀರಿನ ಸೋಲಾರ್ ಗಳಿಗೆ ಅಳವಡಿಸಿರುವ ಸೋಲಾರ್ ಟ್ಯೂಬ್‌ಗಳು ಹಾನಿಗೊಂಡಿವೆ
ಜಿಲ್ಲೆಯ ಕಡೂರು, ಆಲ್ದೂರು, ಬಾಳೆಹೊನ್ನೂರುನಲ್ಲಿಯೂ ವ್ಯಾಪಕ ಮಳೆಯಾಗಿದೆ.

Thunderstorm in Chikkamagaluru city