ಚಿಕ್ಕಮಗಳೂರು : ನಗರದ ರಾಮನಹಳ್ಳಿಯ ಗಿರಿ ಗಂಗೋತ್ರಿ ಆವರಣದಲ್ಲಿರುವ ಸರ್ಕಾರಿ ಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ನಡೆಯಿತು.

ಕಂದಾಯ ಹಿರಿಯ ಉಪ ವಿಭಾಗಾಧಿಕಾರಿ ಡಾ. ಹೆಚ್.ಎಲ್.ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹತ್ತು ಹಲವು ವಿಸ್ತೃತವಾದ ವರದಿ ಸಿದ್ದಪಡಿಸಲು ನಿರ್ಧರಿಸಲಾಗಿದೆ.  ಶೌಚಾಲಯ, ಹಾಗೂ ಕೊಳವೆ ಬಾವಿಗೆ ತುರ್ತಾಗಿ ಮೋಟಾರ್ ಅಳವಡಿಸುವಂತೆ ನಗರಸಭೆಗೆ ಈಗಾಲೇ ಕಂದಾಯ ಉಪವಿಭಾಗಾಧಿಕಾರಿಗಳು ಪತ್ರ ಬರೆದಿದ್ದಾರೆ ಶುದ್ದ ಕುಡಿಯುವ ನೀರಿನ ಘಟಕ ಕಲ್ಪಿಸುವ ಬಗ್ಗೆ ನಿವೃತ್ತ ವೈದ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ. ಮಹಿಳಾ ಕಾಲೇಜಿನ ಶಾಲಾಭಿವೃದ್ಧಿ ಸಮಿತಿಯ ಪ್ರೇಮ್‌ಕುಮಾರ್, ಸ್ಥಳೀಯರಾದ ವಿಜಯ್‌ಕುಮಾರ್, ಮಂಜುನಾಥ್ ಅರಸ್, ಪ್ರದೀಪ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ವಿಷನ್ ಚಿಕ್ಕಮಗಳೂರು ಟ್ರಸ್ಟಿನ ಪದಾಧಿಕಾರಿಗಳು ಇದ್ದರು.

Reopening of Anganwadi: ಅಂಗನವಾಡಿ ಶಾಲೆಗಳ ಮರು ಆರಂಭ, ಮಕ್ಕಳಿಗೆ ಜಿಲ್ಲಾಧಿಕಾರಿಗಳಿಂದ ಅದ್ಧೂರಿ ಸ್ವಾಗತ