ಬೆಂಗಳೂರು: ಭಾರತೀಯ ರೈಲ್ವೆ ಸಚಿವಾಲಯದ ಕಳೆದ ಭಾನುವಾರದ ಪ್ರಕಟಣೆಯ ಪ್ರಕಾರ “ಪ್ರಯಾಣಿಕರ ಕಾದಿರಿಸುವಿಕೆ ಸಿಸ್ಟಮ್‌”ಅನ್ನು ಮುಂದಿನ 7 ದಿನಗಳು ರಾತ್ರಿ ಸಮಯದಲ್ಲಿ ರಾತ್ರಿ 11:30ರಿಂದ ಬೆಳಗಿನ ಜಾವ 5:30ರವರೆ (6 ಗಂಟೆಗಳ ಕಾಲ) ನಿಷ್ಕ್ರಿಯಗೊಳಿಸಲಾಗುವುದು.  ಕೋವಿಡ್‌ ಪೂರ್ವ ಸಾಮಾನ್ಯ ಸ್ಥಿತಿಯ ರೈಲುಗಳ ಸಂಚಾರ ವ್ಯವಸ್ಥೆಯನ್ನು ಹಂತ-ಹಂತವಾಗಿ ಹೊಂದುವ ಸಲುವಾಗಿ ಹಾಗೂ ಹೊಸ ರೈಲುಗಳ ಕ್ರಮಾಂಖಗಳನ್ನು ವ್ಯವಸ್ಥೆಯಲ್ಲಿ ಸಂಯೋಜಿಸಲು ಈ ಕ್ರಮ ಕೈಗೊಳ್ಳಲಾಗಿದೆಯೆಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರ ಸೇವೆಗಳನ್ನು ಸಾಮಾನ್ಯಗೊಳಿಸುವ ರೈಲ್ವೇ ಇಲಾಖೆಯ ಪ್ರಯತ್ನಗಳ ಭಾಗವಾಗಿ ನಡೆಯುವ ಈ ಪ್ರಕ್ರಿಯೆಯು ನವೆಂಬರ್ 14-15ರ ನಡುವಿನ ರಾತ್ರಿಯಿಂದ ಪ್ರಾರಂಭವಾಗಿದ್ದು ನವೆಂಬರ್ 21-22ರ ನಡುವಿನ ರಾತ್ರಿಯವರೆಗೂ ಮುಂದುವರೆಯಲಿದೆ.

ಎಲ್ಲಾ ಮೇಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳ ಬೃಹತ್ ಬುಕಿಂಗ್‌ ದತ್ತಾಂಶಗಳ ಪರಿಷ್ಕರಣೆ ಮಾಡಬೇಕಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆಯೆಂದೂ ಪ್ರಕಟಣೆ ತಿಳಿಸಿದೆ.  ಇದೊಂದು ಸೌಲಭ್ಯವನ್ನು ಹೊರತುಪಡಿಸಿದರೆ 139 ಸೇವೆ ಸೇರಿದಂತೆ ಉಳಿದ ಎಲ್ಲಾ ಸೌಲಭ್ಯಗಳು ದೊರೆಯುವಲ್ಲಿ ಯಾವ ವ್ಯತ್ಯಯವೂ ಇರುವುದಿಲ್ಲವೆಂದು ಪ್ರಕಟಣೆ ತಿಳಿಸಿದೆ.

Indian Railways says the Passenger Reservation System will be shut down for 6 business hours during the night time for the next seven days

ಇದನ್ನೂ ಓದಿ: Janardhana Reddy: ಮಾಜಿ ಸಚಿವ ಜನಾರ್ಧನ ರೆಡ್ಡಿ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ: ರಾಜ್ಯದಲ್ಲಿ ಬಿಟ್‌ಕಾಯಿನ್ ದಂಧೆ: ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ