ಚಿಕ್ಕಮಗಳೂರು- ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾವೀರರ ಭೋಧನೆ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದು ತೇರಾಪಂಥ್ ಸಭೆಯ ಅಧ್ಯಕ್ಷರಾದ ತಾರಾಚಂದ್ ಜೈನ್ ತಿಳಿಸಿದರು.

ನಗರದ ತೇರಾಪಂಥ್ ಭವನದಲ್ಲಿ ಶ್ರೀ ಜೈನ್ ಸಂಘದ ವತಿಯಿಂದ ಮಹಾವೀರ್ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ ಜಗತ್ತಿಗೆ ಜ್ಞಾನದ ಬೆಳಕು ಸದ್ವಿಚಾರಗಳನ್ನು ಭೋಧಿಸಲೆಂದೇ iಹಾವೀರರ ಜನನವಾಗಿದೆ, ಅಹಿಂಸೆ ಧರ್ಮದ ಮೂಲ ತಿರುಳು ಎಂದು ಅವರು ಭೋಧಿಸಿದ್ದರು, ನಾವುಗಳೆಲ್ಲರು ಅವರ ಮಾರ್ಗದರ್ಶನದಲ್ಲಿಯೇ ನೆಡೆಯಬೇಕು ಎಂದರು.

ಜೈನ್ ಮೂರ್ತಿ ಪೂಜಾ ಸಂಘದ ಕಾರ್ಯದರ್ಶಿ ಸಂಜಯ್ ಜೈನ್ ಮಾತನಾಡಿ ಅಹಿಂಸೆ, ಸತ್ಯ, ಧರ್ಮ, ಅಪರಿಗ್ರಹ ಮುಂತಾದ ಮಹಾವೀರರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು ಮಾನವರು ದುಃಖ, ಹಿಂಸಿಗೆ ಉತ್ತರ ಹುಡುಕಬೇಕಾದರೆ ಏನು ಮಾಡಬೇಕು ಎನ್ನುವ ಸಂದೇಶವನ್ನು ಸಾರಿದ್ದರು, ಇಂದಿನ ಯುವ ಪೀಳಿಗೆಯು ಮಹಾವೀರರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆ ಕೆಲಸಗಳನ್ನು ಮಾಡಬೇಕು ಎಂದರು.

ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್ ಮಾತನಾಡಿ ಪ್ರಸ್ತುತ ಜಗತ್ತಿನಲ್ಲಿ ನೆಡೆಯುತ್ತಿರುವ ವಿದ್ಯಾಮಾನಗಳಿಗೆ ಮಹಾವೀರರ ಬೋಧನೆಗಳು ದಾರಿ ದೀಪವಾಗಿವೆ ಎಂದರು.

ಈ ಸಂದರ್ಭದಲ್ಲಿ ಜೈನ್ ಯುವ ಒಕ್ಕೂಟದ ಹಿತೇಶ್ ಗಾದಿಯಾ, ಜೈನ್ ಮಹಿಳಾ ಸಂಘದ ಅಧ್ಯಕ್ಷೆ ಸಪ್ನಾ ಜಾಜೇದ್, ಜೈನ್ ಸಂಘದ ಕಾರ್ಯದರ್ಶಿ ರಮೇಶ್ ಖಿವೇಸರ್, ಕಿಶೋರ್ ಖಿವೇಸರ್, ತೇರಾಪಂಥ್ ಸಂಘದ ಕಾರ್ಯದರ್ಶಿ ಮಹೇಂದ್ರ ಸಿಯಲ್ ಮತ್ತಿತರರು ಉಪಸ್ಥಿತರಿದ್ದರು.

Mahavir Jayanti by Shri Jain Sangh at Terapanth Bhawan in the city