ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನನಾಯಕರಲ್ಲಿ ಒಬ್ಬರು. ಅವರು ನಿರ್ವೀವವಾಗಿರುವ ಸಂಗತಿ. ಅವರ ಅಧಿಕಾರದ ರಾಜಕಾರಣಕ್ಕೆ 40 ವರ್ಷ ಆಯ್ತು. 40 ವರ್ಷಗಳ ಬಳಿಕ ಸುರಕ್ಷಿತ ಕ್ಷೇತ್ರ ಹುಡುಕಾಡುವ ಸ್ಥಿತಿಗೆ ಬಂದಿದೆ. ಸಿದ್ದರಾಮಯ್ಯ ಅಂತ ಹೇಳುವುದಿಲ್ಲ. ಅವರ ಪಾರ್ಟಿ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ ಎಂದು ಶಾಸಕ ಸಿ.ಟಿ.ರವಿ ಈ ಬಾರಿಯೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾಯಕನಿಗೆ ಸುರಕ್ಷತೆ ಇಲ್ಲದಿದ್ದರೆ ಅವರ ಪಾರ್ಟಿಗೆ ಹೇಗೆ ಸುರಕ್ಷತೆ ಇರುತ್ತೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಅವರ ನಾಯಕನೇ ಗೆದ್ದು ಬರುವುದು ಕಷ್ಟ ಅಂತ ಇದ್ದ ಮೇಲೆ ಅವರ ಪಕ್ಷ ಹೇಗೆ ಗೆದ್ದು ಬರುತ್ತೆ ಎಂದಿದ್ದಾರೆ.

ಹೇಗೆ ಗೆಲ್ಲಲು ಸಾಧ್ಯ. ಒಂದಂತು ಸತ್ಯ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ಗೆ ಸುರಕ್ಷಿತ ವಾತಾವರಣ ಎಲ್ಲೂ ಇಲ್ಲ. ಒಂದು ಜಮಾನದ ಕಾಲದಲ್ಲಿ ಇತ್ತು. ಕಾಂಗ್ರೆಸ್ಸಿನಿಂದ ಯಾರನ್ನ ನಿಲ್ಲಿಸಿದ್ರು ಗೆದ್ದು ಬರುತ್ತಿದ್ದರು. ಚಿಕ್ಕಮಗಳೂರಿನಲ್ಲೂ ಯುವವಾಸ್ ಎಂದು ಒಬ್ಬರು ಗೆದ್ದಿದ್ದರು. ಯಾರು ಅಂತ ಬಹಳ ಜನರಿಗೆ ಗೊತ್ತಿರಿಲಿಲ್ಲ. ಆ ಕಾಲ ಈಗಿಲ್ಲ. ಈಗ ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟ ಬುತ್ತಿ. ಸಿದ್ದರಾಮಯ್ಯನವರಿಗೆ ಎಂದು ನಾನು ಹೇಳುವುದಿಲ್ಲ. ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟ ಬುತ್ತಿ. ಸುರಕ್ಷಿತ ಸ್ಥಳ ಅನ್ನೋ ವಾತಾವರಣ ನಮ್ಮ ದೇಶದಲ್ಲಿ ಇಂದು ಕಾಂಗ್ರೆಸ್ಸಿಗೆ ಉಳಿದಿಲ್ಲ. ಅವರು ಸುರಕ್ಷಿತ ವಾತಾವರಣ ಬೇಕು ಅಂದ್ರೆ ನಾನು ಅಂದೇ ಹೇಳಿದ್ದೇನೆ. ಸದ್ಯಕ್ಕೆ ಕಾಂಗ್ರೆಸ್ಸಿಗರಿಗೆ ಸುರಕ್ಷಿತವಾಸ ಸ್ಥಳ ಅಂದ್ರೆ ಅದು ಪಾಕಿಸ್ತಾನ ಮಾತ್ರ.

ಇನ್ನು ಉರಿಗೌಡ ನಂಜೇಗೌಡ ವಿಚಾರ ನಡೆಯುತ್ತಿರುವ ಮಾತಿನ ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬೋರೇಗೌಡನ ಮೇಲೆ ಪ್ರೀತಿ ಇರೋದಕ್ಕೆ ಬಡ ಬೋರೇಗೌಡನ ಖಾತೆಗೆ ವರ್ಷಕ್ಕೆ 10 ಸಾವಿರ ಹಣ ಹಾಕುತ್ತಿರುವುದು. ಬೋರೇಗೌಡನ ಮೇಲೆ ಕಾಳಜಿ ಇರೋದಕ್ಕೆ ಹಾಲಿಗೆ ಐದು ರೂಪಾಯಿ ಸಬ್ಸಿಡಿ ಕೊಡುತ್ತಿರುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ಉರಿಗೌಡ-ನಂಜೇಗೌಡರ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉರಿಗೌಡ-ನಂಜೇಗೌಡರಿಗಿಂತ ನಮಗೆ ಬೋರೇಗೌಡ ಮುಖ್ಯ ಎಂದಿದ್ದರು. ಕುಮಾರಸ್ವಾಮಿಗೆ ಹೇಳಿಕೆಗೆ ಟಾಂಗ್ ಕೊಟ್ಟ ಸಿ.ಟಿ.ರವಿ ರವಿ, ಬೋರೇಗೌಡನ ಮೇಲೆ ಪ್ರೀತಿ ಇರೋದಕ್ಕೆ ಕಿಸಾನ್ ಸಮ್ಮಾನ್ ಯೋಜನೆ, ಹಾಲಿಗೆ ಸಬ್ಸಿಡಿ ಹಾಗೂ ಬಡ್ಡಿ ಇಲ್ಲದೆ ಐದು ಲಕ್ಷ ಹಣ ಕೊಡುತ್ತಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಲೆಳೆದಿದ್ದಾರೆ.

ಬೋರೇಗೌಡನ ಬಗ್ಗೆ ಕಾಳಜಿ ಇದೆ. ಆದರೆ, ಪ್ರೇರಣೆ ಎಲ್ಲಿಂದ ಸಿಗುತ್ತೆ. ಇತಿಹಾಸದಿಂದ ಸಿಗುತ್ತೆ. ಇತಿಹಾಸದಿಂದ ಪ್ರೇರಣೆ ಪಡೆಯಬೇಕು, ನಾವು ಬರೀ ಮನುಷ್ಯರು ಮಾತ್ರ ಕರೆಸಿಕೊಂಡರೇ ಸಾಲೋದಿಲ್ಲ ಎಂದಿದ್ದಾರೆ. ಮನುಷ್ಯರು ಎಂದಾಗ ನೀವು ಯಾರು ಎಂಬ ಪ್ರಶ್ನೆ ಬರುತ್ತೆ. ನಾವು ಕನ್ನಡಿಗರು. ಹೊರಗಿನವರು ನೀನು ಯಾರು ಅಂದ್ರೆ ಭಾರತೀಯ ಎಂದು ಹೇಳುತ್ತೇವೆ. ಹಿಂದೂ ಅಂತ ಹೇಳುತ್ತೇವೆ. ಜಾತಿಯಲ್ಲಿ ಯಾರು ಅಂದ್ರೆ ಜಾತಿ ಹೆಸರೇಳುತ್ತೇವೆ. ಅದರಲ್ಲಿ ಯಾರ ಮಗ ಅಂದರೆ ತಂದೆ ಹೆಸರೇಳುತ್ತೇವೆ. ಅದು ನಮ್ಮ ಐಡೆಂಟಿಟಿ. ಗ್ರಾಮ-ಊರಿನ ಹೆಸರೇಳುತ್ತೇವೆ. ನಮ್ಮ ಐಡೆಂಟಿಟಿ.

ಅದೇ ರೀತಿ ನಮಗೊಂದು ಅಸ್ಮಿತೆ ಇದೆ. ಐಡೆಂಟಿಟಿ ಇದೆ. ಅದರ ಜೊತೆ ಸಮಾಜ ಗುರುತಿಸುತ್ತೆ. ಇದೇ ವೇಳೆ, ಉರಿಗೌಡ-ನಂಜೇಗೌಡ ಕಾಲ್ಪನಿಕ ಪಾತ್ರ. ಸಿ.ಟಿ.ರವಿ, ಅಶ್ವಥ್ ನಾರಾಯಣ್, ಬಿಜೆಪಿ, ಆರ್.ಎಸ್.ಎಸ್. ಸೃಷ್ಠಿ ಎಂದವರು ನಮ್ಮನ್ನ ಕ್ಷಮೆ ಕೇಳಬೇಕು ಎಂದರು. ದೇ.ಜವರೇಗೌಡರು ಸಾಮಾನ್ಯ ಜನರಲ್ಲ. ಅವರನ್ನ ಅವರು ಬರೆದ ಪುಸ್ತಕವನ್ನ ನೀವು ಅವಮಾನಿಸುತ್ತಿರಾ… ಮಾಜಿ ಪ್ರಧಾನಿ ದೇವೇಗೌಡರು ಬಿಡುಗಡೆ ಮಾಡಿರೋ ಪುಸ್ತಕವನ್ನ ನೀವು ಅಪಮಾನ ಮಾಡುತ್ತಿರಾ… ಸುವರ್ಣ ಮಂಡ್ಯ ಅನ್ನೋದನ್ನ ನೀವು ಅಪಮಾನ ಮಾಡುತ್ತೀರಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Pakistan is safe for Congressmen