ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಂದೇ ಮಾತರಂ ಗೀತೆ ಹಾಡಲು ವಿರೋಧ ವ್ಯಕ್ತಪಡಿಸಿರುವುದು ಅವರ ಜಿಹಾದಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದು, ಈ ದೇಶದಲ್ಲಿ ಎಲ್ಲ ಧರ್ಮೀಯರು ಮುಕ್ತ ಮನಸಿನಿಂದ ಒಪ್ಪಿಕೊಂಡಿರುವ ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸುವುದು ಸಿದ್ದರಾಮಯ್ಯರ ಜಿಹಾದಿ ಮನಸ್ಥಿತಿ  ಮತ್ತು ದೇಶದ ಏಕತೆಗಿಂತ ಅಧಿಕಾರಕ್ಕಾಗಿ ಸಮಾಜ ಒಡೆಯುವುದೇ ಮುಖ್ಯ ಎನ್ನುವುದನ್ನು ತೋರಿಸುತ್ತದೆ ಎಂದು ಟೀಕಿಸಿದೆ.

ಬ್ರಿಟಿಷರು ವಂದೇ ಮಾತರಂ ಹಾಡನ್ನು ವಿರೋಧಿಸಿದ್ದರು, ಈಗ ಅದೇ ಸಾಲಿಗೆ ವಿಪಕ್ಷ ನಾಯಕ ಸೇರ್ಪಡೆಯಾಗಿದ್ದಾರೆ.ಅವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದೆ.

Siddaramaiah refuses to sing Vande Mataram