ಟ್ವಿಟ್ಟರ್ ಸಿಇಒ ಲಾನ್ ಮಸ್ಕ್ ನಿತ್ಯ ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ.

ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್​ಕಾಯಿನ್​ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ. ಮಸ್ಕ್​ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್​ನಲ್ಲಿ ಪಕ್ಷಿಯ ಲೋಗೋ ಕಾಣಿಸಲಿದೆ.

ಬಿಟ್​ ಕಾಯಿನ್​ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು ಅಪಹಾಸ್ಯ ಮಾಡಲು 2013ರಲ್ಲಿ ತಮಾಷೆಗಾಗಿ ಈ ನಾಯಿ ಚಿತ್ರ ರಚಿಸಲಾಗಿತ್ತು. 2022ರ ಏಪ್ರಿಲ್​ನಲ್ಲಿ ಟ್ವಿಟ್ಟರ್ ಖರೀದಿಸುವ 22 ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಆರಂಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು.

ಸ್ವಯಂ ಘೋಷಿತ ಲೋಗೋ ನಿರ್ಧಾರವನ್ನು ಟ್ವಿಟರ್‌ ಮಾಲೀಕ ಎಲೋನ್ ಮಸ್ಕ್ ಖಚಿತ ಪಡಿಸಿದ್ದಾರೆ. ಇದಲ್ಲದೆ ಎಲೋನ್ ಮಸ್ಕ್ ಅವರ ಈ ಹೊಸ ನಿರ್ಧಾರವು ಉತ್ತಮ ಬದಲಾವಣೆಗೆ ಕಾರಣವಾಗಿದೆ. ಏಕೆಂದರೆ ಲೋಗೋವನ್ನು ಡೋಜ್ ಮೆಮೆಗೆ ಬದಲಾಯಿಸಿದ ಸ್ವಲ್ಪ ಸಮಯದ ನಂತರ,  ಕ್ರಿಪ್ಟೋಕರೆನ್ಸಿಯ ಮೌಲ್ಯವು 30 ಪ್ರತಿಶತದಷ್ಟು ಸೇರ್ಪಡೆಯಾಗಿದೆ.

A dog came instead of the blue bird