ನವದೆಹಲಿ: ಶೀಘ್ರವೇ ಟೆಲಿಕಾಂ(Telecom) ಕಂಪನಿಗಳು ತಮ್ಮ ಪ್ಯಾಕ್‌ಗಳ ದರಗಳನ್ನು ಏರಿಸುವ ಸಾಧ್ಯತೆಯಿದೆ. ಈಗಾಗಲೇ ಏರ್‌ಟೆಲ್‌(Airtel) ಕಂಪನಿ ಎರಡು ಸರ್ಕಲ್‌ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್‌ಟೆಲ್‌ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ.

ಹರ್ಯಾಣ ಮತ್ತು ಒಡಿಶಾ ಸರ್ಕಲ್‌ನಲ್ಲಿ ಏರ್‌ಟೆಲ್‌ ಕನಿಷ್ಟ ರಿಚಾರ್ಚ್‌ ದರವನ್ನು ಶೇ.57ರಷ್ಟು ಏರಿಕೆ ಮಾಡಿದೆ. ಈ ಮೊದಲು 99 ರೂ. ರಿಚಾರ್ಜ್‌ ಮಾಡಿದರೆ 28 ದಿನಗಳ ವ್ಯಾಲಿಡಿಟಿ, 99 ರೂ. ಟಾಕ್‌ ಟೈಂ ಮತ್ತು 200 ಎಂಬಿ ಡೇಟಾ ಸಿಗುತ್ತಿತ್ತು. ಈಗ ಈ ಪ್ಯಾಕ್‌ ದರವನ್ನು155 ರೂ.ಗೆ ಏರಿಕೆ ಮಾಡಲಾಗಿದೆ.  28 ದಿನಗಳ ವ್ಯಾಲಿಡಿಟಿಯ ಜೊತೆಗೆ ಹೆಚ್ಚುವರಿಯಾಗಿ ಅನ್‌ಲಿಮಿಟೆಡ್‌ ಕಾಲ್‌ ಮತ್ತು 1 ಜಿಬಿ ಡೇಟಾ ಮತ್ತು 300 ಉಚಿತ ಎಸ್‌ಎಂಎಸ್‌ ನೀಡಿದೆ.

Airtel pack price hiked