ಶ್ರೀ ರಾಮನವಮಿ ಇಂದು ರಾಮ ಹುಟ್ಟಿದ ದಿನ. ದಶರಥ ಮಹಾರಾಜನ ಮಗನಾಗಿ ಅಯೋಧ್ಯೆಯಲ್ಲಿ ಶ್ರೀ ರಾಮನ ಜನನವಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಈ ದಿನ ಯುಗಾದಿ ಹಬ್ಬ ಕಳೆದು 8 ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.

ಈ ದಿನ ರಾಮ, ವಿಷ್ಣುವಿನ ಭಕ್ತರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ರಾಮನಿಗೆ ಇಷ್ಟವಾದ ಪ್ರಸಾದವನ್ನು ನೈವೇದ್ಯ ಮಾಡುತ್ತಾರೆ. ರಾಮನಾಮ, ಭಜನೆ, ಕೀರ್ತನೆಗಳಿಂದ ದೇವಾಲಯಗಳು ಭಾವೈಕ್ಯತೆಯ ಸಂಕೇತವಾಗಿ ಕಾಣುತ್ತವೆ. ಈ ಹಬ್ಬವು ಹಿಂದೂಗಳಿಗೆ ನೈತಿಕ ಪ್ರತಿಬಿಂಬದ ಒಂದು ಸಂದರ್ಭವಾಗಿದೆ. ಕೆಲವರು ಈ ದಿನದಂದು ವ್ರತ (ಉಪವಾಸ) ಮಾಡುತ್ತಾರೆ.

ದೇಶದ ಹಲವೆಡೆ ರಾಮನ ರಥೋತ್ಸವ, ಸೀತಾರಾಮ ಕಲ್ಯಾಣ ಅದ್ದೂರಿಯಾಗಿ ನಡೆಯುತ್ತವೆ. ಅಯೋಧ್ಯೆ ಮತ್ತು ಸೀತಾ ಸಮಾಹಿತ್ ಸ್ಥಲ್ (ಉತ್ತರ ಪ್ರದೇಶ), ಸೀತಮಾರ್ಹಿ (ಬಿಹಾರ), ಜನಕ್ಪುರ್ಧಮ್ (ನೇಪಾಳ), ಭದ್ರಾಚಲಂ (ತೆಲಂಗಾಣ), ಕೋದಂಡರಾಮ ದೇವಸ್ಥಾನ, ವೊಂಟಿಮಿಟ್ಟಾ (ಆಂಧ್ರಪ್ರದೇಶ) ಮತ್ತು ರಾಮೇಶ್ವರಂ(ತಮಿಳುನಾಡು)ನಲ್ಲಿ ರಥಯಾತ್ರೆಗಳು , ರಥದ ಶೋಭ ಯಾತ್ರೆ ಎಂದೂ ಕರೆಯಲ್ಪಡುವ ರಥದ ಮೆರವಣಿಗೆಗಳಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತ್ತದೆ.

ಅನೇಕರು ಪವಿತ್ರವಾದ ಸರಯು ನದಿಯಲ್ಲಿ ಸ್ನಾನ ಮಾಡಿ ರಾಮನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ತಯಾರು ಮಾಡಿ ಬಂದವರಿಗೆ ಪ್ರಸಾದವಾಗಿ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ

Rama’s birthday

ಇದನ್ನೂ ಓದಿ: Rain forecast : ರಾಜ್ಯದಲ್ಲಿ ಮತ್ತೆ ಮಳೆ ಮುನ್ಸೂಚನೆ

ಇದನ್ನೂ ಓದಿ: