ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಬಗ್ಗೆ ಯಾವುದೇ ಗೊಂದಲವಿಲ್ಲ.ಸಂಸದರಿಗೆ ಭಾಷೆ ಮುಖ್ಯವಾಗುವುದಿಲ್ಲ ಕೆಲಸ ಮುಖ್ಯವಾಗುತ್ತದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್‌ಮಧ್ವರಾಜ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ, ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ವಾತಾವರಣ ಸೃಷ್ಟಿಯಾಗಿದೆ. ಎರಡು ಜಿಲ್ಲೆಯ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ತಕರಾರು ಇಲ್ಲದೆ ಬೆಂಬಲಿಸುತ್ತಿದ್ದಾರೆಂದು ತಿಳಿಸಿದರು.

ಪ್ರಚಾರಕಾರ್ಯ ಆರಂಭಗೊಂಡಿದ್ದು, ಗೆಲ್ಲುವುದು ನಿಶ್ಚಿತವಾಗಿದೆ. ಅಂತರದ ಗೆಲುವನ್ನು ಕಾಪಾಡಿಕೊಳ್ಳಬೇಕಿ ದೆ.ಸರಳ, ಸಜ್ಜನಿಕೆ ಪ್ರವೃತ್ತಿಹೊಂದಿರುವ ಕೋಟಶ್ರೀನಿವಾಸಪೂಜಾರಿಯವರು ಪಂಚಾಯಿತಿ ಮಟ್ಟದಿಂದ ಕೆಲಸಮಾಡಿದ್ದಾರೆ. ಈಗ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ದೊರೆತ್ತಿದೆ ಎಂದರು.

ಕಳೆದ ತಿಂಗಳು ಜಿಲ್ಲೆಯಲ್ಲಿ ಸುತ್ತಾಡಿದಾಗ ಶ್ರೀಕಂಠಪ್ಪನವರ ಬಗ್ಗೆ ಜನರು ಒಳ್ಳೆಯ ಮಾತುಗಳನ್ನಾಡಿ ದ್ದರು.ಅವರನ್ನೆ ಹೋಲುವ ವ್ಯಕ್ತಿ ಶ್ರೀನಿವಾಸಪೂಜಾರಿಯವರಾಗಿದ್ದಾರೆ. ಜನರ ಕೈಗೆ ಸುಲಭವಾಗಿ ಸಿಗಲಿದ್ದಾರೆ. ಅವರ ಉತ್ತರಾಧಿಕಾರಿಯಾಗಲು ಯೋಗ್ಯ ವ್ಯಕ್ತಿಯಾಗಿದ್ದಾರೆಂದರು ಹೇಳಿದರು.

ಐದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಶ್ರಮಿಸುತ್ತಿದ್ದೇವೆ.ಕೋಟಾ ಅವರ ಆಯ್ಕೆ ಸಮಾಜಿಕ ನ್ಯಾಯದ ಪರವಾಗಿದ್ದು, ಅಕ್ಕಪಕ್ಕದ ಜಿಲ್ಲೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ,ಜಿಲ್ಲಾ ವಕ್ತಾರರಾದ ಸಿ.ಹೆಚ್.ಲೋಕೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಮಧುಕುಮಾರ್‌ರಾಜ್ ಅರಸ್ ಇದ್ದರು.

There is no confusion about BJP candidate selection