ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮತದಾನ ಶಾಂತಿಯುತ ಅಂತ್ಯ ಕಾಣುವ ಹೊತ್ತಲ್ಲೇ ಬಾಳೇಹೊನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಪರಸ್ಪರ ಹೊಡೆದಾಡಿಕೊಂಡಿದ್ದಾರೆ, ಉಜಿವಿ ಮತದಾನ ಕೇಂದ್ರದ ಬಳಿ ಮಾಜಿ ಭಜರಂಗದಳ ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ಸ್ಥಳೀಯ ಬಿಜೆಪಿ ಮುಖಂಡರೇ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಬಾಳೆಹೊನ್ನೂರು ಬಿಜೆಪಿ ಅಂತರಿಕ ಕಲಹ ಮತ್ತೊಮ್ಮೆ ಬೀದಿ ಗಲಾಟೆ ಮೂಲಕ ಬಹಿರಂಗಗೊಂಡಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತದಾನದ ವೇಳೆ ಘರ್ಷಣೆ ನಡೆದಿರುವುದು ಒಳ ಬೇಗುದಿಯ ಹೊಡೆತ ಮತ್ತೆ ಬಿಜೆಪಿಗೆ ತಟ್ಟಿದೆ.

ಮಾಜಿ ಭಜರಂಗದಳ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ ನಡುವಿನ ಮುಸುಕಿನ ಗುದ್ದಾಟ ಇದೀಗ ಹೊಡೆದಾಟದ ಸ್ವರೂಪ ಪಡೆದುಕೊಂಡಿದೆ. ಮತದಾನ ನಡೆಯುತ್ತಿದ್ದ ಬಾಳೆಹೊನ್ನೂರಿನ ಮತಕೇಂದ್ರಗಳಿಗೆ ಭೇಟಿ ಕೊಡುತ್ತಿದ್ದ ಖಾಂಡ್ಯಪ್ರವೀಣ್ ಹಾಗೂ ಬೆಂಬಲಿಗರ ಮೇಲೆ ಜೀವರಾಜ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ

ಬಿದರೆ ಪಂಚಾಯ್ತಿ ಸುತ್ತಮುತ್ತ ತೆರಳುತ್ತಿದ್ದ ವೇಳೆ ಪರಸ್ಪರ ಎರಡೂ ಬಣದ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಪ್ರವೀಣ್ ಖಾಂಡ್ಯ ತಲೆಗೆ ಪೆಟ್ಟುಬಿದ್ದು ಗಂಭೀರ ಗಾಯವಾಗಿ ರಕ್ತಸ್ವಾಥವಾಗಿದೆ. ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ್ ಮಾಜಿ ಶಾಸಕ ಜೀವರಾಜ್ ವಿರುದ್ಧ ಹರಿ ಹಾಯ್ದಿದ್ದಾರೆ.

Attack on former Bajrang Dal leader Khandya Praveen