ಚಿಕ್ಕಮಗಳೂರು- ದೇಶ ಹಾಗೂ ಸಂವಿಧಾನದ ರಕ್ಷಣೆಗಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮತ್ತು ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ಮಾಡಬೇಕೆಂದು ಗುರಿ ಹೊಂದಲಾಗಿದೆ ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದರು.

ನಗರದಲ್ಲಿ ಕೆಲವು ವಾರ್ಡ್‌ಗಳಲ್ಲಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದು ಜಾಗೃತಿ ಮೂಡಿಸಲು ನಗರದ ವಿಜಯಪುರ, ಗೌರಿಕಾಲುವೆ ಹಾಗೂ ಇನ್ನೂ ಕೆಲವು ವಾರ್ಡ್‌ಗಳಲ್ಲಿ ಮತದಾನ ಜಾಗೃತಿ ಜಾಥವನ್ನು ಏರ್ಪಡಿಸಲಾಗಿದೆ ಎಂದರು.

ಅವರು ನಗರಸಭೆಯಿಂದ ಮನೆ-ಮನೆ ಕಸ ಸಂಗ್ರಹಣೆ ಗಾಡಿಗಳಿಂದ ಮತ್ತು ಟ್ರ್ಯಾಕ್ಟರ್‌ಗಳನ್ನು ಒಳಗೊಂಡಂತೆ ಒಂದು ಬೃಹತ್ ಮಟ್ಟದ ಜಾಗೃತಿ ಜಾಥ ಏರ್ಪಡಿಸಲಾಗುವುದು. ಏ.೨೦ ರಂದು ನಗರಸಭೆ ವತಿಯಿಂದ ನಗರದ ಎಂ.ಜಿ ರಸ್ತೆಯಲ್ಲಿ ವಿನೂತನ ವಿವಿಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಏ.೨೬ ರಂದು ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಸಂವಿಧಾನ ಬದ್ಧವಾದ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳಾದ ರವಿ, ತೇಜಸ್ವಿ, ವೆಂಕಟೇಶ್, ರಂಗಪ್ಪ, ಶಶಿರಾಜ್ ಅರಸ್, ಚಂದ್ರಶೇಖರ್ ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Voting awareness march by Municipal Council