ಚಿಕ್ಕಮಗಳೂರು(ಕನ್ನಡನಾಡಿ ಸುದ್ದಿಜಾಲ): ಹುಲಿ ಅಳಿವಿನ ಅಂಚಿನಲ್ಲಿದ್ದ ಪ್ರಾಣಿಯಾಗಿತ್ತು, ಆದ್ರೆ ಈಗ ಆನೆಗಳು ಸಹ ಅಳಿವಿನ ಅಂಚಿಗೆ ಸರಿದಿವೆ.  ಏಷ್ಯಾದ ಆನೆಗೆ ಈ ಸಂಕಟ ಒದಗಿದೆ ಎಂದು ವರದಿಯಾಗಿದೆ.

ಇಂಟರ್ನಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ (IUಅಓ) ಈ ವಿಚಾರವನ್ನು ದೃಡಿಸಿದೆ.  ಅಪಾಯದಂಚಿನಲ್ಲಿರುವ ಪ್ರಾಣಿಗಳ ಪೈಕಿ ಏಷಿಯನ್ ಆನೆ ಸಹ ಒಂದು.

ಪುರಾಟಗಳ ಕಾಲದಿಂದಲೂ ಆನೆ ಬಹುಪಯೋಗಿಯಾಗಿದೆ.  ಬದುಕಿದ್ದಾಗಲೂ, ಸತ್ತ ಮೇಲೂ ಮಾನವನ ದುರಾಸೆಗೆ ಬಳಕೆಯಾಗುತ್ತಲೇ ಇರುವ ಆನೆಯ ದಿನಾಚರಣೆಯನ್ನು ೨೦೧೨ರಿಂದ ಆಚರಿಸಲಾಗ್ತಿದೆ.

ಆನೆ-ಮಾನವ ಸಂಘರ್ಷ ಕೂಡಾ ಪುರಾತನವಾದ್ದು, ಇಂದಿಗೂ ಸಾಗುತ್ತಲೇ ಇದೆ.  ಚಿಕ್ಕಮಗಳೂರು, ಬನ್ನೇರುಘಟ್ಟ, ಬಿಆರ್ ಟಿ, ಕೊಳ್ಳೇಗಾಲ, ಮಡಿಕೇರಿ, ಹಾಸನ, ದಾಂಡೇಲಿ, ಬೆಂಗಳೂರು ಗ್ರಾಮಾಂತರ, ಬಂಡಿಪುರ, ನಾಗರಹೊಳೆ, ಭದ್ರಾ ಅಭಯಾರಣ್ಯಗಳಲ್ಲಿ ಆನೆ ಗಣತಿ ನಡೆಸುತ್ತಾ ಬಂದಿದ್ದಾರೆ.

ಇಂದಿಗೂ ವಿದೇಶಿ ಕಳ್ಳ ಮಾರುಕಟ್ಟೆಯಲ್ಲಿ ಆನೆಯ ದಂತ, ಮೂಳೆಗಳಿಗೆ ಬಲು ಬೇಡಿಕೆ ಇದೆ, ಹೀಗಾಗಿ ಕಳ್ಳರಿಂದ ಸಹ ಆನೆಗಳನ್ನು ಕಾಪಾಡುವ ಗುರುತರ ಜವಾಬ್ದಾರಿ ಅರಣ್ಯ ಇಲಾಖೆಯೊಂದಿಗೆ ಜನಸಾಮಾನ್ಯರದ್ದು ಕೂಡಾ.