ಚಿಕ್ಕಮಗಳೂರು: ಚುನಾವಣೆ ಸಂಬಂಧ ಜಿಲ್ಲೆಯ ಗಡಿಭಾಗದಲ್ಲಿ ತೆರೆದಿರುವ ಚೆಕ್ ಪೋಸ್ಟ್‌ಗಳಲ್ಲಿ ನಿತ್ಯ ದಾಖಲೆ ಇಲ್ಲದ ಹಣ ಹಾಗೂ ಇತರೆ ವಸ್ತುಗಳು ಸಿಗುತ್ತಲೇ ಇವೆ ಬುಧವಾರ ಕಡೂರಿನ ಚೌಡಿಪಾಳ್ಯ ಬಳಿ ಇಂದು ಬರೋಬ್ಬರಿ ೨೦ ಲಕ್ಷ ಹಣ ಓಮ್ಮಿ ವಾಹನದಲ್ಲಿ ಕೊಂಡುಯ್ಯುವಾಗ ವಶಪಡಿಸಿಕೊಳ್ಳಲಾಗಿದೆ.

ಕೆನರಾ ಬ್ಯಾಂಕ್‌ಗೆ ಸೇರಿದ ಹಣ ಎಂದು ಹೇಳಲಾಗುತ್ತಿದ್ದರೂ ಓಮ್ಮಿ ವಾಹನ ನಂಬರ್ ಪ್ಲೇಟ್ ಬದಲಿಸಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಜಿಲ್ಲೆಯ ಗಡಿಭಾಗದಲ್ಲಿ ಮತ್ತಷ್ಟು ತಪಾಸಣೆ ಹೆಚ್ಚಿಸಲಾಗಿದೆ.

ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡಿಪಾಳ್ಯ ಚೆಕ್ ಪೋಸ್ಟ್ ನಲ್ಲಿ ಇಂದು ದಾಖಲೆ ಸರಿ ಇಲ್ಲದ ೨೦ ಲಕ್ಷ ಹಣವನ್ನು ಸೀಜ್ ಮಾಡಲಾಗಿದೆ. ಪಂಚನಹಳ್ಳಿ ಕೆನರಾ ಬ್ಯಾಂಕ್‌ನಿಂದ ಹಿರಿಯೂರಿನ ಡಿ.ಎಂ ಕುರ್ಕೆಗೆ ಓಮ್ಮಿ ವಾಹನದಲ್ಲಿ ತೆಗೆದುಕೊಂಡು ಹೋಗಲಾಗತಿತ್ತು. ಆದರೆ ಓಮ್ಮಿ ವಾಹನದಲ್ಲಿ ಏಕೆ ಮತ್ತು ಯಾವುದೇ ಗನ್ ಮ್ಯಾನ್ ಇಲ್ಲದೇ ಹಣ ಕೊಂಡೋಯ್ಯುತ್ತಿದ್ದದು ಏಕೆ ಎಂಬ ಪ್ರಶ್ನೆ ಮೂಡಿದೆ. ಈ ನಡುವೆ ತಪಾಸಣೆ ವೇಳೆ ಒಮ್ಮಿ ವಾಹನದ ನಂಬರ್ ಬದಲಾಗಿರುವುದು ಕಂಡು ಬಂದಿದೆ.

20 lakh cash in Ommi’s vehicle was seized at Chowdipalaya in Kadur