ಚಿಕ್ಕಮಗಳೂರು: ೭೦ ವರ್ಷ ದೇಶವಾಳಿದ ಕಾಂಗ್ರೆಸ್ ಪಕ್ಷ ಮಾಡಬಾರದ್ದನ್ನೆಲ್ಲಾ ಮಾಡಿ ದೇಶದ ಮುನ್ನಡೆ ಹಾದಿಯ ಹಳಿತಪ್ಪಿಸಿದೆ. ಅದನ್ನು ಸರಿಪಡಿಸಲು ಸಾಕಷ್ಟು ದಿನಗಳು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಲ್ಲಿ ಬುಧವಾರ ಜಿಲ್ಲೆಯ ನಾಲ್ಕು ವಿಧಾನಭಾ ಕ್ಷೇತ್ರಗಳ ಬಿಜೆಪಿ ಪದಾಧಿಕಾರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಅವರ ಕೈಗೆ ಆಡಳಿತ ಬಂದ ಮೇಲೆ ದೇಶದಲ್ಲಿ ಬಹುದೊಡ್ಡ ಪರಿವರ್ತನೆ ಆಗಿದೆ. ಜಗತ್ತಿನಲ್ಲಿ ನಮ್ಮ ಕೀತಿ ಎತ್ತರಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆ ಗೆಲ್ಲುವುದು ಅಗತ್ಯವಿದೆ ಎಂದರು.

ಈಗಾಗಲೇ ಜಮ್ಮು, ಕಾಶ್ಮೀರ ಒಂದು ರೀತಿ ವಿದೇಶದ ಮಾದರಿ ಆಗಿತ್ತು. ಆರ್ಟಿಕಲ್ ೩೭೦ ತೆಗೆದು ಹಾಕಿ ಸಂಪೂರ್ಣ ಭಾರತಕ್ಕೆ ಸೇರಿಸಲಾಗಿದೆ. ರಾಮ ಮಂದಿರ ನಿರ್ಮಾಣವಾಗಿದೆ. ತ್ರಿಬಲ್ ತಲಾಖ್ ರದ್ದು ಮಾಡಲಾಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಇನ್ನೂ ಹಲವು ಕೆಲಸಗಳು ಬಾಕಿ ಇದೆ ಎಂದರು.

ನಮ್ಮ ಬೂತ್‌ನ್ನು ನಾವು ಗೆಲ್ಲುವ ಕೆಲಸವನ್ನು ಮೊದಲು ಮಾಡಬೇಕು. ನಂತರ ಬೂತ್ ಬಲಪಡಿಸುವ ಕುರಿತು ಉಳಿದ ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕು. ಬೂತ್ ಮಟ್ಟದಲ್ಲಿ ಪೇಜ್ ಪ್ರಮುಖರ ಪಟ್ಟಿಮಾಡಬೇಕು ಎಂದರು.

ಈಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಈ ಚುನಾವದೇಶವನ್ನ ಕಟ್ಟುವಂತಹದ್ದು, ಪಾಕಿಸ್ಥಾನ್ ಪರ ಕೂಗುವವರ ಕುರಿತು ಜನತೆಗೆ ಜಾಗೃತಿ ಮೂಡಿಸುವ ಚುನಾವಣೆಯಾಗಿದೆ ಎಂದರು.

ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ ಚುನಾವಣೆ ನಿರ್ವಹಣಾ ಸಮಿತಿಯ ವಿವಿಧ ವಿಭಾಗಗಳನ್ನು ರಚಿಸಲಾಗಿದೆ. ಅದರಲ್ಲಿ ನಮ್ಮ ತಂಡಕ್ಕೆ ನ್ಯಾಯ ಒದಗಿಸಿದಲ್ಲಿ ಚುನಾವಣೆ ಗೆದ್ದಂತಾಗುತ್ತದೆ ಎಂದರು.

ನಾವು ಇರುವ ಬೂತ್‌ಗಳಲ್ಲಿ ಮೊದಲು ಮುನ್ನಡೆ ತಂದು ಕೊಡಬೇಕು. ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ಚುನಾವಣೆ, ಸಂಘಟನೆ ಕೆಲಸ ಮಾಡುತ್ತಿದ್ದರೂ ತಮ್ಮ ಬೂತ್‌ಗಳನ್ನು ನಿರ್ಲಕ್ಷಿಸಬಾರದು ಎಂದು ಕರೆ ನೀಡಿದರು.

ಚುನಾವಣೆ ದಿನಾಂಕ ನಿಗಧಿ ಆದ ದಿನದಿಂದ ನಮ್ಮ ಕಾರ್ಯಕರ್ತರಲ್ಲಿ ಅತ್ಯಂತ ಉತ್ಸಾಹವನ್ನು ಕಾಣುತ್ತಿದ್ದೇವೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕೆಂಬ ತುಡಿತ ಎಲ್ಲರಲ್ಲೂ ಇದೆ. ನಮಗೆ ಅತ್ಯಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಅವರ ಬಗ್ಗೆ ಮತದಾರರು ಅತ್ಯಂತ ವಿಶ್ವಾಸ ಇಟ್ಟಿದ್ದಾರೆ. ತನು, ಮನ, ಧನದೊಂದಿಗೆ ಅವರನ್ನು ಬೆಂಬಲಿಸುತ್ತಿದ್ದಾರೆ. ಜನರ ಈ ಎಲ್ಲಾ ಅಬಿಮಾನಗಳನ್ನು ನಾವು ಮತವಾಗಿ ಪರಿವರ್ತಿಸಬೇಕಾಗಿದೆ. ಕೇಂದ್ರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕ್ಲಸ್ಟರ್‌ನ ಸಂಚಾಲಕ ಭಾನುಪ್ರಕಾಶ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬೆಳವಾಡಿ ರವೀಂದ್ರ, ಡಾ.ನರೇಂದ್ರ, ಪುಣ್ಯಪಾಲ್ ಇತರರು ಇದ್ದರು.

A workshop of BJP functionaries of Vidhanbha constituencies held at BJP District Office Panchajanya