ಚಿಕ್ಕಮಗಳೂರು: ಹಿಂದೂಗಳ ಆರಾಧ್ಯದೈವ ಬಾಲರಾಮನ ಮಂದಿರವನ್ನು ನಿರ್ಮಿಸಲು ಶ್ರಮಿಸಿದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಮತದಾರರು ಬಿಜೆಪಿಗೆ ಬೆಂಬಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ನಾಗೇನಹಳ್ಳಿ, ಹುಲಿಕೆರೆ ಹಾಗೂ ಪಿಳ್ಳೇನಹಳ್ಳಿ ಗ್ರಾಮಗಳಿಗೆ ಲೋಕಸಭಾ ಚುನಾವಣಾ ಸಂಬಂಧ ಪ್ರಚಾರ ಕಾರ್ಯದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು ಭವ್ಯಭಾರತ ನಿರ್ಮಿಸುವ ಸಂಕಲ್ಪ ಹೊಂದಿರುವ ನರೇಂದ್ರ ಮೋದಿಗೆ ಕೈಬಲಪಡಿಸಬೇಕು ಎಂದರು.

ದೇಶದಲ್ಲಿ ಹತ್ತು ವರ್ಷಗಳ ಕಾಲ ಶ್ರೀಸಾಮಾನ್ಯರು, ಬಡವರು, ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಿದವರು ಕೇಂದ್ರದ ಬಿಜೆಪಿ ಸರ್ಕಾರ. ದೀನದಲಿತರ ಉದ್ದಾರಕ್ಕಾಗಿ ಅನೇಕ ಸವಲತ್ತು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸೌಲಭ್ಯ ಪಡೆದುಕೊಳ್ಳದ ಫಲಾನುಭ ವಿಗಳಿಲ್ಲ ಎಂದು ಹೇಳಿದರು.

ಮುಂದಿನ ಭವಿಷ್ಯದಲ್ಲಿ ದೇಶವನ್ನು ಸದೃಢವಾಗಿ ಕಟ್ಟುವ ಹಾಗೂ ವಿಶ್ವದೆದುರು ಸಮರ್ಥವಾಗಿ ನಿಲ್ಲುವ ಏಕೈಕ ನಾಯಕ ನರೇಂದ್ರ ಮೋದಿ. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಮತ ನೀಡುವ ಮೂಲಕ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಇನ್ನಷ್ಟು ಶಕ್ತಿಯುತವಾ ಗಲಿದೆ ಎಂದರು.

ರಾಜ್ಯಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಕುಟುಂಬದ ಮುಖ್ಯಸ್ಥರಿಂದ ಹಿಂಬದಿಯಿಂದ ಹಣ ಪಡೆದು ಮು ಂಬದಿಯಿಂದ ಉಚಿತ ಗ್ಯಾರಂಟಿಗಳನ್ನು ಘೋಷಿಸಿದೆ. ಇದರಿಂದ ಮುಂಬರುವ ದಿನಗಳಲ್ಲಿ ರಾಜ್ಯವು ಆರ್ಥಿಕ ದಿವಾಳಿಯಾಗುವ ಸಂಭವವಿದೆ ಎಂದ ಅವರು ಮತದಾರರು ದೇಶದ ಚುನಾವಣೆಯಲ್ಲಿ ಆಸೆಗಳಿಗೆ ಬಲಿಯಾಗ ದೇ ಸಶಕ್ತ ಭಾರತ ನಿರ್ಮಾಣಕ್ಕೆ ಮುಂದಾಗವೇಕು ಎಂದು ಹೇಳಿದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ ರಾಷ್ಟ್ರವನ್ನು ವಿಶ್ವದಲ್ಲೇ ಉನ್ನತ ಸ್ಥಾನಮಾನ ಗಳಿಸುವಲ್ಲಿ ಹಾಗೂ ಜನತೆಯ ಏಳಿಗೆಗಾಗಿ ಜೀವನವನ್ನು ಮುಡಿಪಾಗಿಟ್ಟವರು ಪ್ರಧಾನಿ ನರೇಂದ್ರ ಮೋದಿ. ಇಂಥ ಪ್ರಧಾನಿ ಭಾರತಕ್ಕೆ ದೊರೆತಿರುವುದು ನಮ್ಮೆಲ್ಲರ ಪುಣ್ಯ. ಹೀಗಾಗಿ ದೇಶವನ್ನು ಆರ್ಥಿಕ ಪ್ರಗತಿಯಿಂದ ಮುನ್ನೆಡೆಸುವ ಬಿಜೆಪಿ ಸರ್ಕಾ ರಕ್ಕೆ ಅಧಿಕಾರ ನೀಡಬೇಕಿದೆ ಎಂದು ತಿಳಿಸಿದರು.

ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ಕ್ಷೇತ್ರದ ರೈತರು, ಬೆಳೆಗಾರರು ಹಾಗೂ ಜನಸಾಮಾನ್ಯರಲ್ಲಿ ಸಂಪರ್ಕ ಹೊಂದಿರುವ ಇವರಿಗೆ ಅಮೂಲ್ಯ ಮತವನ್ನು ನೀಡಿ ಜಯಶೀಲರಾಗಿಸುವ ಜೊತೆಗೆ ದೇಶವನ್ನು ಸುಭದ್ರ ಆಡಳಿತ ನಡೆಸಲು ಮತದಾರರು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ತಾ.ಪಂ. ಮಾಜಿ ಸದಸ್ಯ ಆನಂದ್‌ನಾಯ್ಕ್, ಮುಖ ಂಡರುಗಳಾದ ಕೋಟೆ ರಂಗನಾಥ್, ಕೊಲ್ಲಾಬೋವಿ, ಉಮೇಶ್, ಮಾಲತೇಶ್ ಮತ್ತಿತರರಿದ್ದರು.

BJP has worked as the voice of the oppressed