ಪಲ್ಲಕೆಲೆ: ಏಷ್ಯಾಕಪ್ ಟೂರ್ನಿ 2023ರಲ್ಲಿ ಭಾರತ ಮೊದಲ ಗೆಲುವಿನ ಸಿಹಿ ಕಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ನೇಪಾಳ ವಿರುದ್ಧದ ಪಂದ್ಯವೂ ಮಳೆಗೆ ಸ್ಥಗಿತಗೊಂಡಿತ್ತು. ಆದರೆ ಡಕ್‌ವರ್ತ್ ನಿಯಮ ಅನ್ವಯಿಸಿ ಭಾರತಕ್ಕೆ 23 ಓವರ್‌ಗಳಲ್ಲಿ 145 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಗುರಿಯನ್ನು ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆರಂಭಿಕರ ಜೋಡಿ ನಿರಾಯಾಸವಾಗಿ ಚೇಸ್ ಮಾಡಿತು.

20.1 ಓವರ್‌ಗಳಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಸೂಪರ್ 4 ಹಂತಕ್ಕೇರಿತು. ಇತ್ತ ರೋಹಿತ್ ಹಾಗೂ ಶಭಮನ್ ಗಿಲ್ ಜೋಡಿ ದಾಖಲೆ ಬರೆಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ನೇಪಾಳ 48.2 ಓವರ್‌ಗಳಲ್ಲಿ 230 ರನ್‌ಗೆ ಆಲೌಟ್ ಆಗಿತ್ತು. ಆದರೆ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ಮಳೆ ಅಡ್ಡಿಯಾಯಿತು. 2.1 ಓವರ್‌ಗಳಲ್ಲಿ 17 ರನ್ ಸಿಡಿಸುವಷ್ಟರಲ್ಲೇ ಮಳೆ ವಕ್ಕರಿಸಿತ್ತು.  ಗುರಿ ಚೇಸ್ ಮಾಡಲು ಮಳೆ ಅನುವು ಮಾಡಿಕೊಡಲಿಲ್ಲ. ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯ ಪುನರ್ ಆರಂಭವೇ ಅಸಾಧ್ಯವಾಗಿತ್ತು. ಅಂತಿಮ ಹಂತದಲ್ಲಿ ಮಳೆ ನಿಂತಿತ್ತು. ಪಲ್ಲಕೆಲೆ ಕ್ರೀಡಾಂಗಣ ಸಿಬ್ಬಂಧಿ ಮೈದಾನ ಸಜ್ಜುಗೊಳಿಸಿದರು. ಡಕ್‌ವರ್ತ್ ನಿಯಮದ ಪ್ರಕಾರ ಭಾರತಕ್ಕೆ 23 ಓವರ್‌ಗಳಲ್ಲಿ 145 ರನ್ ಟಾರ್ಗೆಟ್ ನೀಡಲಾಗಿತ್ತು.

ಮೈದಾನಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ 39 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರೆ, ಶುಭಮನ್ ಗಿಲ್ 47 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಭಾರತ 20.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ರೋಹಿತ್ ಶರ್ಮಾ ಅಜೇಯ 74 ಹಾಗೂ ಶುಭ್‌ಮನ್ ಗಿಲ್ ಅಜೇಯ 67 ರನ್ ಸಿಡಿಸಿದರು. 10 ವಿಕೆಟ್ ಗೆಲುವು ದಾಖಲಿಸಿದ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಿತು. ನೇಪಾಳ ಟೂರ್ನಿಯಂದ ಹೊರಬಿದ್ದತು.

ಆರಂಭಿಕರಾದ ರೋಹಿತ್ ಹಾಗೂ ಗಿಲ್ ಅಜೇಯ 147 ರನ್ ಜೊತೆಯಾಟ ನೀಡುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ಒಪನಿಂಗ್ ಪಾರ್ಟ್ನರ್‌ಶಿಪ್ ನೀಡಿದ ಹೆಗ್ಗಳಿಕೆಗೆ ಪಾತ್ರರಾದರು.

India win by 10 wickets against Nepal