ಕೋಲ್ಕತಾ: ಯಶಸ್ವಿ ಜೈಸ್ವಾಲ್ ಅಬ್ಬರಕ್ಕೆ ಕೆಕೆಆರ್ ಪುಡಿಪುಡಿಯಾಗಿದೆ. ಕೇವಲ 13 ಎಸೆತದಲ್ಲೇ ಅರ್ಧಶತಕ ಪೂರೈಸಿ ಐಪಿಎಲ್ ಇತಿಹಾಸದಲ್ಲಿ ಅತೀವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಹಾಫ್ ಸೆಂಚುರಿ ಬಳಿಕವೂ ಜೈಸ್ವಾಲ್ ಅಬ್ಬರ ಮುಂದುವರಿದಿದೆ. ಜೈಸ್ವಾಲ್ ಅಜೇಯ 98 ರನ್ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ದಾಖಲಿಸಿದೆ.

ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುಲು ವಿಫಲವಾದ ಕೆಕೆಆರ್ 149 ರನ್ ಸಿಡಿಸಿತು. ಸುಲಭ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಯಶಸ್ವಿ ಜೈಸ್ವಾಲ್ ನೀಡಿದ ಆರಂಭಕ್ಕೆ ಗೆಲುವು ಖಚಿತಪಡಿಸಿಕೊಂಡಿತು. ಇದರ ನಡುವೆ ಜೋಸ್ ಬಟ್ಲರ್ ಡಕೌಟ್ ಆದರೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಯಾವುದೇ ಆತಂಕ ಎದುರಾಗಲಿಲ್ಲ. ಕಾರಣ ಜೈಸ್ವಾಲ್ ಕೇವಲ 13 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಹಾಫ್ ಸೆಂಚುರಿ ದಾಖಲೆ ಬರೆದರು.

ಐಪಿಎಲ್ ಇತಿಹಾಸದಲ್ಲಿ ಅತೀವೇಗದ ಅರ್ಧ ಶತಕ
ಯಶಸ್ವಿ ಜೈಸ್ವಾಲ್, 13 ಎಸೆತ
ಕೆಎಲ್ ರಾಹುಲ್, 14 ಎಸೆತ
ಪ್ಯಾಟ್ ಕಮಿನ್ಸ್, 14 ಎಸೆತ

ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಟಕ್ಕೆ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವಿನ ಸೂಚನೆ ನೀಡಿತು. ಇತ್ತ ಕೆಕೆಆರ್ ಬಳಿ ಉತ್ತರವೇ ಇರಲಿಲ್ಲ. ಈ ಜೋಡಿಯನ್ನು ಬೇರ್ಪಡಿಸಲು ಪ್ರಯತ್ನ ಮಾಡಿದರೂ ಯಾವುದು ಪ್ರಯೋಜನವಾಗಲಿಲ್ಲ. ಒಂದೆಡೆ ಜೈಸ್ವಾಲ್ ಬೌಂಡರಿ, ಸಿಕ್ಸರ್ ಮೂಲಕ ಅಬ್ಬರಿಸಿದರೆ, ಇತ್ತ ಸಂಜು ಸ್ಯಾಮ್ಸನ್ ಉತ್ತಮ ಸಾಥ್ ನೀಡಿದರು.

ಜೈಸ್ವಾಲ್ 47 ಎಸೆತದಲ್ಲಿ ಅಜೇಯ 98 ರನ್ ಸಿಡಿಸಿದರೆ, ಸಂಜು ಸ್ಯಾಮ್ಸನ್ 29 ಎಸೆತದಲ್ಲಿ ಅಜೇಯ 48 ರನ್  ಸಿಡಿಸಿದರು.ಈ ಮೂಲಕ ರಾಜಸ್ಥಾನ ರಾಯಲ್ಸ್ 13.1 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 9 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಕೆಕೆಆರ್ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಅಬ್ಬರಿಸಲು ವಿಫಲವಾಯಿತು. 8 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿತು. ವೆಂಕಟೇಶ್ ಅಯ್ಯರ್ 57 ರನ್ ಸಿಡಿಸಿದರು. ಆದರೆ ಇತರರಿಂದ ನಿರೀಕ್ಷಿತ ಹೋರಾಟ ಬರಲಿಲ್ಲ. ಜೇಸನ್ ರಾಯ್ 10, ರಹಮಾನುಲ್ಲಾ ಗುರ್ಬಾಜ್ 18, ನಾಯಕ ನಿತೀಶ್ ರಾಣಾ 22 ರನ್, ಆ್ಯಂಡ್ರೆ ರಸೆಲ್ 10, ರಿಂಕು ಸಿಂಗ್ 16, ಶಾರ್ದೂಲ್ ಠಾಕೂರ್ 1, ಸುನಿಲ್ ನರೈನ್ 6 ಹಾಗೂ ಅಂಕುಲ್ ರಾಯ್ ಅಜೇಯ 6 ರನ್ ಸಿಡಿಸಿದರು.

Rajasthan Royals lost 1 wicket in the overs and got a huge win