ಚಿಕ್ಕಮಗಳೂರು: ಭಾವನೆ ಮತ್ತು ಬದುಕಿನ ಮಧ್ಯೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಭಾವನೆ ವಿಚಾರದಲ್ಲಿ, ಕಾಂಗ್ರೆಸ್ ಪಕ್ಷ ಬದುಕಿನ ವಿಚಾರದಲ್ಲಿ ಜನರ ಮುಂದೆ ಬಂದಿವೆ. ಬದುಕಿನ ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಮನ್ನಣೆ ನೀಡಲಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದಸ್ವಾಮಿ ತಿಳಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ದೇಶದಲ್ಲಿ ಈ ಬಾರಿ ಭಾವನೆ ಮತ್ತು ಬದುಕಿನ ನಡುವೆ ಚುನಾವಣೆ ನಡೆಯುತ್ತಿದೆ. ಭಾವನೆಗಳು ಬೇಕು ಆದರೆ ಬದುಕೇ ಇಲ್ಲದೆ ಭಾವಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಹಾಗೂ ೧೮ನೇ ಲೋಕಸಭಾ ಚುನಾವಣೆ ಮುನ್ನ ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಯ ಗ್ಯಾರಂಟಿಗಳು ಜನರ ಬದುಕಿನ ಗ್ಯಾರಂಟಿಗಳಾಗಿದ್ದು ಇವುಗಳು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನರಿಯದ ಬಿಜೆಪಿ ಧರ್ಮ, ಮಂದಿರ ಮತ್ತು ಹಸಿ ಸುಳ್ಳುಗಳನ್ನು ಹೇಳುತ್ತಾ ಹೊರಟಿದ್ದು, ಇವೆಲ್ಲ ಅವರಿಗೆ ಜಯ ತಂದುಕೊಡಲಾರವು. ಕಾಂಗ್ರೆಸ್ ಪಕ್ಷ ಮತ್ತದರ ಕೂಟದ ಅಭ್ಯರ್ಥಿಗಳಿಗೆ ನಿರೀಕ್ಷೆಗೂ ಮೀರದ ಜಯ ಸಿಗಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ಕೂಡ ಬಾರಿ ಅಂತರದಿಂದ ಆರಿಸಿ ಬರಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಪ್ರಪಂಚದ ಹಿರಿಯಣ್ಣ ಎಂದು ಕರೆಸಿಕೊಂಡಿರುವ ಅಮೇರಿಕ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಅಬಲರಿಗೆ ಬೇರೆ ಬೇರೆ ಹೆಸರುಗಳಲ್ಲಿ ಆರ್ಥಿಕ ಸಹಕಾರ ದೊರೆಯುತ್ತಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿಶೇ?ವಾಗಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪಂಚ ಗ್ಯಾರಂಟಿಗಳು ರಾಷ್ಟ್ರಕ್ಕೆ ಮಾದರಿಯಾಗಿವೆ ಎಂಬುದನ್ನು ಬಿಜೆಪಿಯೇ ಒಪ್ಪಿಕೊಳ್ಳುವ ಸ್ಥಿತಿ ಬಂದಿರುವುದರಿಂದ ಅವರೂ ಕೂಡ ಮೋದಿ ಗ್ಯಾರಂಟಿ ಎಂಬ ಪದ ಬಳಕೆ ಮಾಡುವಲ್ಲಿಗೆ ಮುಟ್ಟಿದ್ದಾರೆ ಎಂಬುದು ಜಗಜ್ಜಾಹಿರವಾಗಿದೆ ಎಂದು ಹೇಳಿದರು.

ರಾಜ್ಯದ ಸುಮಾರು ೨ ಕೋಟಿ ಮಹಿಳೆಯರಲ್ಲಿ ೧ ಕೋಟಿ ೨೦ ಲಕ್ಷ ಮಹಿಳೆಯರಿಗೆ ತಿಂಗಳಿಗೆ ೨೦೦೦ ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಪಡೆದು ತಮ್ಮ ದೈನಂದಿನ ಬದುಕನ್ನು ಒಂದಿ? ನೆಮ್ಮದಿಯಿಂದ ನಡೆಸಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ೨.೬೩ ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದ ೧ ಕೋಟಿ ೩೦ ಲಕ್ಷ ಮನೆಗಳ ಪೈಕಿ ೧ ಕೋಟಿ ಮನೆಗಳಿಗೆ ಗರಿ? ೨೦೦ ಯೂನಿಟ್ ವಿದ್ಯುತ್ ನೀಡುತ್ತಿರುವುದರಿಂದ ಸುಮಾರು ೪ ಕೋಟಿ ಜನರ ಬೆಳಕಿನ ಬಾಗಿಲು ತೆರೆದಿದೆ. ಜಿಲ್ಲೆಯಲ್ಲಿ ಇದರ ಲಾಭ ೩ ಲಕ್ಷ ಮನೆಗಳಿಗೆ ದೊರೆಯುತ್ತಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಸುಮಾರು ೧೧ ಲಕ್ಷ ಜನ ಸಂಖ್ಯೆಯಲ್ಲಿ ೨ ಲಕ್ಷಕ್ಕೂ ಹೆಚ್ಚು ಜನರಿಗೆ ಹೊಂದಿಲ್ಲೊಂದು ಯೋಜನೆ ತಲುಪುತ್ತಿದೆ. ಇವರೆಲ್ಲರೂ ಈ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಲು ಕಾಂಗ್ರೆಸ್ ಗ್ಯಾರಂಟಿಗಳಿಂದ ಸಾಧ್ಯವಾಗಿದೆ ಎಂದು ನಂಬಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಫಲಾನುಭವಿಗಳ ಪ್ರತಿಕ್ರಿಯೆಯಿಂದ ನಮಗೆ ತಿಳಿಯುತ್ತದೆ. ಕೃತಜ್ಞತಾಪೂರಕವಾಗಿ ಇವರೆಲ್ಲ ನಮ್ಮ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆಗೆ ಮತ ಬರಲಿವೆ ಎಂದು ಶಿವಾನಂದಸ್ವಾಮಿ ದೃಢವಿಶ್ವಾಸ ವ್ಯಕ್ತಪಡಿಸಿದರು.

ಇ?ಲ್ಲದೇ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ಕಳೆದ ನಾಲ್ಕು ದಶಕದ ರಾಜಕೀಯ ಜೀವನವನ್ನು ಕಳಂಕ ರಹಿತ ಮತ್ತು ಸದಾ ಅಭಿವೃದ್ಧಿಪರ ಕೆಲಸ ಮಾಡುವವರು ಎಂಬುದನ್ನು ರಾಜಕೀಯ ವಿರೋಧಿಗಳು ಕೂಡ ಒಪ್ಪುತ್ತಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಹಿರಿಯ ನಾಗರಿಕರು, ಕಾರ್ಯಕರ್ತರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಹಂಶುಮಂತ್ ಅವರ ನೇತೃತ್ವದಲ್ಲಿ ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ. ಇದೆಲ್ಲದರ ಕಾರಣಗಳಿಂದ ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಗಿಂತ ಕನಿ? ೧ ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿರುವ ಶಿವಾನಂದಸ್ವಾಮಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಜಿಲ್ಲಾ ಸಮಿತಿ ನಿರ್ದೇಶಕರುಗಳಾದ ಜೇಮ್ಸ್ ಡಿಸೋಜ, ಅನ್ಸರ್ ಅಲಿ, ರೋಹಿತ್, ಪುನೀತ್, ನಾಗೇಶ್ ಅರಸ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಉಪಸ್ಥಿತರಿದ್ದರು.

Voters credit Congress party for giving life guarantee