ಚಿಕ್ಕಮಗಳೂರು:  ಕೇಂದ್ರ ಸರ್ಕಾರ ಜನಪರ ಯೋಜನೆಗಳಾದ ಜಲ್‌ಜೀವನ್ ಮಿಷನ್, ಜನೌಷಧಿ ಕೇಂದ್ರ, ಕಿಸಾನ್ ಸಮ್ಮಾನ್, ಉಚಿತ ಗ್ಯಾಸ್ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಬಡವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ ದಯಾಕರ್‌ಗೌಡ ಮನವಿ ಮಾಡಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕೀಯ, ಕಪ್ಪುಹಣ ಸಂಗ್ರಹಣೆ, ಧರ್ಮ, ಜಾತಿ ಒಡೆದು ಆಳುವ ನೀತಿ, ಹಿಂದೂ ಧರ್ಮ ವಿರೋಧಿ, ಡೋಂಗಿ ಜಾತ್ಯಾತೀತವಾದಿ ಮತ್ತು ಅರ್ಥವ್ಯವಸ್ಥೆಯನ್ನು ನಾಶ ಮಾಡಿ ೧೯೯೧ರಲ್ಲಿ ಜಾಗತೀಕರಣ, ಉದಾರೀಕರಣ, ಆರ್ಥೀಕರಣ, ಹೆಸರಿನಲ್ಲಿ ಗ್ಯಾಟ್, ಡೆಂಕೆಲ್, ಡಬ್ಲ್ಯೂ-ಟಿ-ಒ ಒಪ್ಪಂದ ಮಾಡಿಕೊಂಡು ಬಂಡವಾಳ ಶಾಹಿಗಳಿಗೆ ಬಹುರಾಷ್ಟ್ರ ಕಂಪೆನಿಗಳಿಗೆ ದೇಶದ ಹಿತಾಸಕ್ತಿಗೆ ಮಾರಕವಾದವರು ಎಂದರು.

ಇವುಗಳ ವಿರುದ್ದ ರೈತ ಸಂಘ, ಪ್ರೋಫೆಸರ್ ನಂಜುಂಡಸ್ವಾಮಿ ಕೊನೆಯವರೆಗೂ ಹೋರಾಟ ಮಾಡಿದ್ದು, ಇವರ ದಾಸ್ಯದ ಸಂಕೋಲೆ ದುರಾಡಳಿತಕ್ಕೆ ಅಂತ್ಯ ಹಾಡಿದ ಬಿಜೆಪಿಯ ವಾಜಪೇಯಿ ಆಡಳಿತದಲ್ಲಿ ಸರ್ವ ಶಿಕ್ಷಣ ಅಭಿಯಾನ, ಅನ್ನ ಅಂತ್ಯೋದಯ ಯೋಜನೆ, ಪೋಕ್ರಾನ್ ಅಣು ಸ್ಪೋಟ, ಸುವರ್ಣ ಚತುಷ್ಪಥ ಹೆದ್ದಾರಿಗಳು, ದೆಹಲಿಯಿಂದ ಲಾಹೋರ್ ಬಸ್ ಪ್ರಯಾಣ, ಜೆಡಿಎಸ್‌ನ ದೇವೇಗೌಡರ ಆಡಳಿತದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಹಾಗೂ ರೈತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಜೈಕಿಸಾನ್, ಜೈಜವಾನ್, ಜೈವಿಜ್ಞಾನ್ ಆಧಾರದ ಮೇಲೆ ಸ್ವಚ್ಚ ದಕ್ಷ ಬಲಿಷ್ಠ ಸಚಿವ ಸಂಪುಟದಲ್ಲಿ ಮಂತ್ರಿಗಳನ್ನು ಟೀಂವರ್ಕರ್‌ನ್ನಾಗಿ ತಯಾರು ಮಾಡಿ ಮಾದರಿ ಸ್ಥಿರ ಸರ್ಕಾರವನ್ನು ನೀಡಿ, ಸ್ವಚ್ಚ ಭಾರತದ ಆಂದೋಲನದಲ್ಲಿ ಗ್ರಾಮೀಣ ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಶೇ. ೯೮ ರಷ್ಟು ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ದೇಶದ ೮೦ ಕೋಟಿ ಜನರಿಗೆ ಉಚಿತ ಪಡಿತರ ಯೋಜನೆ, ೧೧ ಸಾವಿರ ಜನ ಔಷಧಿ ಕೇಂದ್ರಗಳು, ೧೦ ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ, ಪಿ.ಎಂ.ಆವಾಸ್ ಯೋಜನೆಯಲ್ಲಿ ಬಡ ಜನರಿಗೆ ೫.೫ ಕೋಟಿ ಮನೆ, ೪೦ ಕೋಟಿ ಜನರಿಗೆ ಜೀರೋ ಬ್ಯಾಲೆನ್ಸ್ ಜನಧನ್ ಖಾತೆ ಯೋಜನೆ, ಕೇಂದ್ರದ ಜಲಜೀವನ್ ಮಿಷನ್ ಮುಖಾಂತರ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

Vote for BJP for the bright future of the country